ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿದೆ. ಉತ್ತರ ಕರ್ನಾಟಕದ ಜನರು ನನಗೆ ಮತ ನೀಡಿಲ್ಲ. ಮತದಾನದ ವೇಳೆ ನಾನು ನೆನಪಾಗಿಲ್ಲ ಎನ್ನುವ ಕುಮಾರಸ್ವಾಮಿಗೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ರಾಜ್ಯಾದ್ಯಂತ ಎಲ್ಲೂ ಬರ ಕಾಮಗಾರಿಗೆ ಚಾಲನೆ ದೊರಕಿಲ್ಲ. ಜನ ಗುಳೆ ಹೋಗುವುದು ತಪ್ಪಿಲ್ಲ. ಕುಮಾರಸ್ವಾಮಿ ಸೇಡಿನ ರಾಜಕೀಯ ಮಾಡುತ್ತಿದ್ದಾರೋ, ಏನೋ ಗೊತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಒಂದು ಪೈಸೆಯನ್ನೂ ಮೀಸಲಿಟ್ಟಿಲ್ಲ. ಸರ್ಕಾರಕ್ಕೆ ಹಣದ ಕೊರತೆ ಎದುರಾಗಿದ್ದು, ಲೋಕೋಪಯೋಗಿ ಸೇರಿ ವಿವಿಧ ಇಲಾಖೆಗಳಲ್ಲಿ ಒಟ್ಟು 10 ಸಾವಿರ ಕೋಟಿ ರೂ.ಬಿಲ್‌ಗಳು ಬಾಕಿ ಉಳಿದಿವೆ ಎಂದು ಆರೋಪಿಸಿದರು.
Advertisement
ಇದೇ ವೇಳೆ, ಸಿದ್ದರಾಮಯ್ಯ ವಿರುದಟಛಿ ಹರಿಹಾಯ್ದ ಅವರು, ಶ್ರೀರಾಮುಲು ಬಾದಾಮಿಯಲ್ಲಿ ಹುಟ್ಟಿದ್ದಾರಾ? ಕನ್ನಡ ಭಾಷೆ ಬರಲ್ಲ. ಮೂರು ಬಾರಿ ರಾಜೀನಾಮೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದೆಲ್ಲ ಸಿದ್ದರಾಮಯ್ಯ ಹೇಳಿದ್ದಾರೆ.ಹಾಗಾದರೆ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಚಿಕ್ಕಮಗಳೂರಲ್ಲಿ ಹುಟ್ಟಿದ್ದರಾ?, ಸೋನಿಯಾಗಾಂಧಿ ಬಳ್ಳಾರಿಯಲ್ಲಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅಮೇಥಿಯಲ್ಲಿ, ಕೇರಳದ ಮಾಜಿ ಸಿಎಂ ಸ್ಟೀಫನ್ ಕಲಬುರಗಿಯಲ್ಲಿ ಹುಟ್ಟಿದ್ದಾರಾ? ಎಂದು ಸಿದ್ದರಾಮಯ್ಯರ ವಿರುದಟಛಿ ಗುಡುಗಿದರು.
● ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಡಿಕೆಶಿ ನಮ್ಮ ಪರ: ಬಿಎಸ್‌ವೈ ವ್ಯಂಗ್ಯ
ಸಂಡೂರು: “ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನಮ್ಮ ಪರವಾಗಿದ್ದಾರಪ್ಪಾ. ನೀವ್ಯಾಕೆ ಅವರ ಬಗ್ಗೆ ಮಾತಾಡ್ತೀರಾ’ ಎಂದು ಯಡಿಯೂರಪ್ಪನವರು ಶ್ರೀರಾಮುಲುಗೆ ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿಯನ್ನು ಟೀಕಿಸಿದರು. ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಪ್ರಚಾರ ಭಾಷಣ ಮಾಡಿದ ಅವರು, “ಸಚಿವ ಡಿಕೆಶಿಯವರನ್ನು ಯಾಕೆ ಬೈತಿರಪ್ಪಾ. ಅವರು ನಮ್ಮೊರಪ್ಪಾ. ನಮ್ಮ ಅಭ್ಯರ್ಥಿ ಸಹೋದರಿ ಶಾಂತಕ್ಕನವರ ಪರವಾಗಿಯೇ ಕೆಲ್ಸ ಮಾಡುತ್ತಿದ್ದಾರಪ್ಪಾ. ಹಾಗೆಲ್ಲ ಬೈಬಾರದಪ್ಪಾ ಎಂದಾಗ, ವೇದಿಕೆ ಮೇಲಿದ್ದ ಶಾಸಕ ಬಿ.ಶ್ರೀರಾಮುಲು ಮುಗುಳ್ನಕ್ಕರು. ಅವರು ಈ ಜಿಲ್ಲೆಗೆ ಆಕಸ್ಮಿಕವಾಗಿ ಉಸ್ತುವಾರಿಯಾಗಿ ಬಂದಿದ್ದಾರೆ. ಅವರತ್ತ ಹಣವಿದೆ ಅಂತಾ ಇಲ್ಲಿಗೆ ಬಂದಿದ್ದಾರೆ. ಅವರು ನಮ್ಮ ಅಭ್ಯರ್ಥಿ ಶಾಂತಕ್ಕನವರ ಪರ ಖರ್ಚು ಮಾಡೋದಕ್ಕೇ ಇಲ್ಲಿಗೆ ಬಂದಿದ್ದಾರೆ. ಹೀಗಾಗಿ ಅವರ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಉಪಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಸಿಎಂ ಕುಮಾರಸ್ವಾಮಿ,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಸ್ಪರ ಮುಖ ನೋಡೋದಿಲ್ಲ. ಇದನ್ನು ಬರೆದಿಟ್ಟುಕೊಳ್ಳಿ ಎಂದು ಭವಿಷ್ಯ ನುಡಿದರು.