Advertisement
47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದು, ಪೊಲೀಸರು ಐಪಿಸಿ 1860 (ಯು/ಎಸ್ 354 (ಎ), 354(ಡಿ), 506, 509ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಅವರನ್ನು ಪ್ರಥಮ (ಎ 1)ಆರೋಪಿ, ಪ್ರಜ್ವಲ್ ರೇವಣ್ಣ ಅವರನ್ನು ದ್ವಿತೀಯ (ಎ 2) ಆರೋಪಿಯನ್ನಾಗಿ ಮಾಡಲಾಗಿದೆ.
ಹೊಳೆನರಸೀಪುರ ಸಮೀಪದ ಡೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯ ಪತ್ನಿಯೊಬ್ಬರಿಗೆ ಎಚ್.ಡಿ. ರೇವಣ್ಣ ಅವರು ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಕೊಡಿಸಿದ್ದರು. ಆಕೆ ಭವಾನಿ ರೇವಣ್ಣ ಅವರ ದೂರದ ಸಂಬಂಧಿಯೂ ಆಗಿದ್ದಾರೆ. ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನು ರೇವಣ್ಣ ಅವರು ತಮ್ಮ ಮೊದಲ ಮಗನ ಮದುವೆ ಸಂದರ್ಭದಲ್ಲಿ ಮನೆಯ ಕೆಲಸಕ್ಕೆ ಕರೆಯಿಸಿಕೊಂಡಿದ್ದರು.
Related Articles
Advertisement
ಹಲವು ಬಾರಿ ಲೈಂಗಿಕ ದೌರ್ಜನ್ಯಹಲವಾರು ಬಾರಿ 2019ರಿಂದ 2022ರ ವರೆಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಹೆದರಿ ನಂಬರ್ ಬ್ಲಾಕ್
ರೇವಣ್ಣ ತನ್ನ ಮಗಳಿಗೆ ಹಲವು ಬಾರಿ ವೀಡಿಯೋ ಕರೆ ಮಾಡಿ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದನೆ ಮಾಡುತ್ತಿದ್ದು, ಹೆದರಿದ್ದ ತನ್ನ ಮಗಳು ನಂಬರ್ ಬ್ಲಾಕ್ ಮಾಡಿದ್ದಳು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಕಾನೂನು ಕ್ರಮಕ್ಕೆ ಒತ್ತಾಯ
ಪ್ರಜ್ವಲ್ ರೇವಣ್ಣ ಎಸಗಿದ್ದಾರೆ ಎನ್ನಲಾದ ವೀಡಿಯೋಗಳು ಇತ್ತೀಚೆಗೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದರಿಂದ ಮಾನಸಿಕ ಹಿಂಸೆ ಆಗುತ್ತಿದೆ. ಹೀಗಾಗಿ ತನ್ನ ಮತ್ತು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಎಚ್.ಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ. ಯಾವ ಸೆಕ್ಷನ್, ಏನು ಶಿಕ್ಷೆ?
-354 (ಎ)-ಲೈಂಗಿಕ ದೌರ್ಜನ್ಯ: 3 ವರ್ಷ ಜೈಲು ಹಾಗೂ ದಂಡ
-354(ಡಿ)- ಪದೇ ಪದೆ ಮಹಿಳೆ ಜತೆ ಲೈಂಗಿಕ ಸಂಪರ್ಕ ಬೆಳೆಸಲು ತಂತ್ರಜ್ಞಾನ ಬಳಕೆ:
3 ಅಥವಾ 5 ವರ್ಷ ಶಿಕ್ಷೆ, ದಂಡ
-506- ಕ್ರಿಮಿನಲ್ ಬೆದರಿಕೆ, ಕೊಲೆ ಬೆದರಿಕೆ: 2- 7 ವರ್ಷ ಜೈಲು ಮತ್ತು ದಂಡ
-509- ಮಹಿಳೆಯನ್ನು ಅವಮಾನಿಸುವುದು:
3 ವರ್ಷ ಜೈಲು ಶಿಕ್ಷೆ ಮತ್ತು ದಂಡ