Advertisement

ರೇವಾ ವಿವಿಗೆ ಆರನೇ ರ್‍ಯಾಂಕ್‌

12:43 PM Oct 04, 2018 | |

ಬೆಂಗಳೂರು: ಯಲಹಂಕ ಸಮೀಪ ವಿಶಾಲ ಕ್ಯಾಂಪಸ್‌ ಹೊಂದಿರುವ ರೇವಾ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ) ರಾಷ್ಟ್ರೀಯ ಮಟ್ಟದಲ್ಲಿ ಸ್ವತ್ಛ ಕ್ಯಾಂಪಸ್‌ ರ್‍ಯಾಂಕಿಂಗ್‌ ನೀಡುವ ಮೂಲಕ ವಿವಿ ಕಾರ್ಯ ಸಾಧನೆಯನ್ನು ಗೌರವಿಸಿದೆ.

Advertisement

ಎಂಎಚ್‌ಆರ್‌ಡಿ ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ಸಮೀಕ್ಷೆ ನಡೆಸಿ ರೇವಾ ವಿವಿಗೆ 6ನೇ ರ್‍ಯಾಂಕ್‌ ನೀಡಿದೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ವಿವಿ ಕುಲಾಧಿಪತಿ ಡಾ. ಪಿ. ಶ್ಯಾಮರಾಜು ಪ್ರಶಸ್ತಿ ನೀಡಿ ಗೌರವಿಸಿದರು. ನಂತರ ಮಾತನಾಡಿದ ಡಾ. ಶ್ಯಾಮರಾಜು ಅವರು ನಮ್ಮ ವಿವಿ ಪರಿಸರ ಸ್ನೇಹಿಯಾಗಿದ್ದು, ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತವಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ನಿರ್ಮಿಸಿರುವ ಶೌಚಾಲಯ, ನೀರಿನ ವ್ಯವಸ್ಥೆ, ಮಳೆ ಕೊಯ್ಲು, ಸೌರಶಕ್ತಿ ಬಳಕೆ, ಕ್ಯಾಂಪಸ್‌ ನಲ್ಲಿರುವ ಉದ್ಯಾನವನ ಎಲ್ಲ ಅಂಶಗಳನ್ನು ಪರಿಗಣಿಸಿ ಎಂಎಚ್‌ ಆರ್‌ಡಿ ಸ್ವತ್ಛ ಕ್ಯಾಂಪಸ್‌ ಎಂದು ಆಯ್ಕೆ ಮಾಡಿದೆ.

ರಾಷ್ಟ್ರೀಯ ಮಟ್ಟದಲ್ಲಿ 6ನೇ ರ್‍ಯಾಂಕಿಂಗ್‌ ನೀಡಿರುವುದು ಹೆಚ್ಚಿನ ಸಂತೋಷ ತಂದಿದೆ. ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಧಿಕಾರಿಗಳ
ತಂಡ ಕಾಲೇಜುಗಳಿಗೆ ಭೇಟಿ ನೀಡಿ ಕ್ಯಾಂಪಸ್‌ಗಳನ್ನು ಪರಿಶೀಲಿಸಿ, ಅಂತಿಮವಾಗಿ 51 ಶಿಕ್ಷಣ ಸಂಸ್ಥೆಗಳಿಗೆ
ನಾನಾ ರೀತಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ ಎಂದರು. ಈ ಸಂದರ್ಭದಲ್ಲಿ ರೇವಾ ವಿವಿ ಕುಲಪತಿ ಡಾ. ವೈ.ಎಸ್‌.
ಕುಲಕರ್ಣಿ, ಕುಲಸಚಿವ ಡಾ. ಎಂ. ಧನಂಜಯ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next