Advertisement

ಯಥಾಸ್ಥಿತಿಗೆ ಮರಳುತ್ತಿವೆ ಗಲಭೆ ಪೀಡಿದ ಸ್ಥಳಗಳು

12:30 AM Jun 14, 2022 | Team Udayavani |

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್‌ ವಿರುದ್ಧದ ಅವಹೇಳನಕಾರಿ ಹೇಳಿಕೆಗಳಿಂದ ಹಿಂಸೆಗೆ ತುತ್ತಾಗಿದ್ದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಪರಿಸ್ಥಿತಿ ನಿಧಾನಕ್ಕೆ ಯಥಾ ಸ್ಥಿತಿಗೆ ವಾಪಸಾಗುತ್ತಿದೆ.

Advertisement

ಇದರ ಹೊರತಾಗಿಯೂ ಪಶ್ಚಿಮ ಬಂಗಾಳದ ಕೆಲವೆಡೆ ಕಿಡಿಗೇಡಿಗಳು ದಾಂಧಲೆ ಎಬ್ಬಿಸಿದ್ದಾರೆ. ಉತ್ತರ ಪ್ರದೇಶ ದಲ್ಲಿ ಜೂ. 10ರಂದು ನಡೆದ ಘಟನೆಗೆ ಸಂಬಂಧಿಸಿದಂತೆ 8 ಜಿಲ್ಲೆ ಗಳಿಂದ 333 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಯಾಗ್‌ ರಾಜ್‌ನಲ್ಲಿ 92, ಸಹರಾನ್‌ಪುರದಲ್ಲಿ 81, ಹತ್ರಾಸ್‌ನಲ್ಲಿ 51, ಅಂಬೇಡ್ಕರ್‌ನಗರದಲ್ಲಿ 41, ಮೊರಾದಾಬಾದ್‌ನಲ್ಲಿ 40, ಪಿರೋಜಾಬಾದ್‌ನಲ್ಲಿ 17, ಅಲಿಗಢದಲ್ಲಿ 6, ಜಲೌನ್‌ನಲ್ಲಿ ಐವರನ್ನು ಬಂಧಿಸಲಾಗಿದೆ. ಇದರ ಜತೆಗೆ 9 ಜಿಲ್ಲೆಗಳಲ್ಲಿ 13 ಎಫ್ಐಆರ್‌ ದಾಖಲಿಸಲಾಗಿದೆ.

ಇದೇ ವೇಳೆ, ಪಶ್ಚಿಮ ಬಂಗಾಲದ ಹೌರಾ, ಮುರ್ಶಿ ದಾಬಾದ್‌, ನಡಿಯಾಗಳಲ್ಲಿ ಸಣ್ಣ ಪುಟ್ಟ ಘರ್ಷಣೆಗಳು ನಡೆದಿವೆ.

ಮತ್ತೊಂದೆಡೆ, ಬಿಜೆಪಿಯಿಂದ ಅಮಾ ನತುಗೊಂಡಿರುವ ನೂಪುರ್‌ ಶರ್ಮಾರಿಗೆ ಕೋಲ್ಕತಾ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿ ದ್ದಾರೆ. ಇನ್ನು, ಟಿಎಂಸಿಯ ಅಲ್ಪಸಂಖ್ಯಾಕರ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಸೊಹೈಲ್‌, ನೂಪುರ್‌ ಶರ್ಮಾ ವಿರುದ್ಧ ಕೇಸು ದಾಖಲಿಸಿದ್ದಾರೆ.

ವೆಬ್‌ಸೈಟ್‌ಗಳ ಹ್ಯಾಕ್‌
ನಿಂದನೆ ಖಂಡಿಸಿ ಕೆಲವು ಹ್ಯಾಕಿಂಗ್‌ ತಂಡಗಳು ಕೇಂದ್ರ ಸರಕಾರ ಮತ್ತು ಖಾಸಗಿ ಸಂಸ್ಥೆ ಗಳ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿವೆ. ಡ್ರ್ಯಾಗನ್‌ಫೋರ್ಸ್‌ ಮಲೇಷಿಯಾ ಹೆಸರಿನ ಹ್ಯಾಕರ್‌ಗಳ ಗುಂಪು, ಇಸ್ರೇಲ್‌ನ ಭಾರತೀಯ ರಾಯಭಾರಿ ಕಚೇರಿಯ ವೆಬ್‌ಸೈಟ್‌, ನ್ಯಾಷನಲ್‌ ಇನ್‌ಸ್ಟ್ರಿಟ್ಯೂಟ್‌ ಆಫ್ ಅಗ್ರಿಕಲ್ಚರ್‌ ಎಕ್ಸ್‌ ಟೆನ್ಶನ್‌ ಮ್ಯಾನೇಜ್‌ಮೆಂಟ್‌, ಇಂಡಿಯನ್‌ ಕೌನ್ಸಿಲ್‌ ಆಫ್ ಅಗ್ರಿಕಲ್ಚರ್‌ ರಿಸರ್ಚ್‌ನ ಇ ಪೋರ್ಟಲ್‌ಗ‌ಳನ್ನು ಹ್ಯಾಕ್‌ ಮಾಡಿರುವುದಾಗಿ ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next