ಹೊಸದಿಲ್ಲಿ: ಸಿಎಎ ವಿರೋಧಿಸಿ ಹೋರಾಟ ಮಾಡಿದ ಪ್ರತಿಭಟನಕಾರರಿಂದ ಹಣವನ್ನು ಸಂಗ್ರಹಿಸಿದ್ದರೆ ಅದನ್ನು ಕೂಡಲೇ ಅವರಿಗೆ ವಾಪಸು ಮಾಡಿ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿದೆ.
ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಮರುಪಡೆಯುವಿಕೆ ಕಾಯ್ದೆ, 2020ರ ಪ್ರಕಾರ ಸರಕಾರ ಹಕ್ಕು ನ್ಯಾಯಮಂಡಳಿಯನ್ನು ಆರಂಭಿಸಿತ್ತು.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಗೆ, ಅದರ ಹಣ ಪಾವತಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಆದರೆ ಹಕ್ಕು ನ್ಯಾಯಮಂಡಳಿಯಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ಬದಲು ಸರಕಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಿಸಿಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಹಾಗಾಗಿ ಸಿಎಎ ವಿರೋಧಿ ಪ್ರತಿಭಟನಕಾರರಿಗೆ ಕಳುಹಿಸಲಾಗಿದ್ದ ನೋಟಿಸ್‌ಗಳನ್ನು ಹಿಂಪಡೆಯಲು ಸೂಚಿಸಿತ್ತು. ಇದೀಗ ಸರಕಾರ ನೋಟಿಸ್ ಹಿಂಪಡೆದಿರುವ ಹಿನ್ನೆಲೆ, ಅವರಿಂದ ಹಣ ಸಂಗ್ರಹಿಸಿದ್ದರೆ ಅದನ್ನೂ ಹಿಂದಿರುಗಿಸಲು ನ್ಯಾಯಾಲಯ ಸೂಚಿಸಿದೆ.