Advertisement

ಆಂಗ್ಲ ಮಾಧ್ಯಮ ಶಾಲೆ ಪ್ರವೇಶ ಮಿತಿ ಹಿಂಪಡೆಯಿರಿ

11:38 AM Jun 09, 2019 | Team Udayavani |

ಶಿಗ್ಗಾವಿ: ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಆಂಗ್ಲ ಮಾಧ್ಯಮ ಆದೇಶ ಸರಿಯಾದ ಮಾರ್ಗ ಸೂಚಿಗಳಿಲ್ಲದೆ ಅವೈಜ್ಞಾನಿಕವಾಗಿದೆ. ಅಲ್ಲದೆ ಪ್ರತಿ ವಿಭಾಗಕ್ಕೆ 30 ಮಕ್ಕಳಿಗೆ ಪ್ರವೇಶ ನಿಗದಿ ಮಾಡಿದ್ದು ಖಂಡನೀಯ ಎಂದು ಜಿಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ ನೇತೃತ್ವದಲ್ಲಿ ನಾರಾಯಣಪೂರ ಗ್ರಾಮದ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹೆಳವರ ಅವರಿಗೆ ಮನವಿ ಸಲ್ಲಿಸಿದರು.

Advertisement

ಈಗಾಗಲೇ ನಾರಾಯಣಪೂರ ಗ್ರಾಮದ ಕೆಪಿಎಸ್‌ ಶಾಲೆಯಲ್ಲಿ ಎಲ್ಕೆಜಿ ಹಾಗೂ 1ನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭವಾಗಿದೆ. ಎಲ್ಕೆಜಿಗೆ 30 ಹಾಗೂ 1ನೇ ತರಗತಿಗೆ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ನಿಗದಿ ಮಾಡಿದೆ. ಆದರೆ, ಸುತ್ತಮುತ್ತಲಿನ ಗ್ರಾಮದ ನಾಗರಿಕರು ಶಿಕ್ಷಕರ ಮೇಲೆ ಒತ್ತಡ ತಂದು ಹೆಚ್ಚುವರಿ ವಿದ್ಯಾರ್ಥಿಗಳ ಶೈಕ್ಷಣಿಕ ಖರ್ಚು ವೆಚ್ಚ ಸ್ವತಃ ಭರಿಸುವುದಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಆದೇಶನ್ವಯ ಅವಕಾಶ ಇಲ್ಲದ ಕಾರಣ ಎಸ್‌ಡಿಎಂಸಿ ಸದಸ್ಯರು ಒಪ್ಪಿಗೆ ಸೂಚಿಸಿದ್ದರೂ ಶಿಕ್ಷಣ ಇಲಾಖೆ ಕಾನೂನಿನಡಿ ಅವಕಾಶವಿಲ್ಲದಾಗಿದೆ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ಬಿಇಒ ಅವಕಾಶ ನಿರಾಕರಿಸಿದ್ದಾರೆ. ಜೂ. 3 ರಂದು ನಾರಾಯಣಪೂರ ಗ್ರಾಮಸ್ಥರು ಸಭೆ ಸೇರಿ ಹೆಚ್ಚಿನ ಮಕ್ಕಳ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಸಲು ಜೂ. 10ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶಾಲೆಯ ಸಮಸ್ಯೆ ಬಗ್ಗೆ ಡಿಡಿಪಿಐ ಹಾಗೂ ಬಿಇಒ ಅವರ ಗಮನಕ್ಕೆ ತಂದರೂ ಸಮರ್ಪಕ ಉತ್ತರ ದೊರೆತಿಲ್ಲ. ಮಕ್ಕಳಿಗೆ ಆಗುತ್ತಿರುವ ಅನ್ಯಾಯಕ್ಕೆ ಹೊಣೆ ಯಾರು ಎಂಬ ಗೊಂದಲ ಶಾಲೆಯ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪಾಲಕರಲ್ಲಿ ಕಾಡುತ್ತಿದೆ. ಸರ್ಕಾರ ಈ ಆದೇಶ ಹೊರಹಾಕುವ ಮೊದಲು ಭರ್ಜರಿ ಪ್ರಚಾರ ಮಾಡಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆದಿದೆ.ಆದರೆ, ಇಷ್ಟೇ ವಿದಾರ್ಥಿಗಳು ಎಂದು ನಿಗದಿ ಮಾಡಿರುವ ಆದೇಶ ಮಾತ್ರ ತಪ್ಪಾಗಿದೆ. ಎಲ್ಲರು ಶಿಕ್ಷಣವಂತರಾಗಬೇಕಾದರೆ ಕೇವಲ 30 ಮಕ್ಕಳಿಗೆ ಪ್ರವೇಶ ಎನ್ನುವ ಆದೇಶ ಹಿಂಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಗಂಗಾಧರ ಬಾವಿಕಟ್ಟಿ, ಮಹದೇವಪ್ಪ ಮಸಳಿ, ಮುದ್ದಪ್ಪ ರಾಮಾಪೂರ, ಸಿದ್ದಪ್ಪ ಭಾವಿಕಟ್ಟಿ, ಶಿವಪ್ಪ ವಡವಿ, ವೀರೇಶ ಬಾವಿಕಟ್ಟಿ, ಶಿದ್ದಪ್ಪ ಚಿನ್ನಪ್ಪನವರ, ಈರಪ್ಪ ಮಲ್ಲಮ್ಮನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next