Advertisement

ನಿವೃತ್ತಿ 8-9 ತಿಂಗಳಲ್ಲಿ ನಿರ್ಧರಿಸುವೆ: Dhoni

12:50 AM May 25, 2023 | Team Udayavani |

ಚೆನ್ನೈ: ಈ ಋತುವಿನ ಐಪಿಎಲ್‌ಗಾಗಿ ಸುದೀರ್ಘ‌ ಸಮಯದಿಂದ ತಯಾರಿ ನಡೆಸಿರುವುದರಿಂದ ಬಹಳಷ್ಟು ಆಯಾಸಗೊಂಡಿ ದ್ದೇನೆ. ಶ್ರೇಷ್ಠ ನಿರ್ವಹಣೆ ನೀಡುವ ಮೂಲಕ ನಾವೀಗ ಫೈನಲ್‌ ಹಂತಕ್ಕೇರಿದ್ದು ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿದ್ದೇವೆ. ಮುಂದಿನ ಎಂಟರಿಂದ 9 ತಿಂಗಳ ಒಳಗಾಗಿ ನಿವೃತ್ತಿಯ ಬಗ್ಗೆ ನಿರ್ಧಾರ ಪ್ರಕಟಿ ಸುವೆ ಎಂದು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಹೇಳಿದ್ದಾರೆ.

Advertisement

ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅಧಿಕಾರಯುತ್ತವಾಗಿ ಸೋಲಿಸಿದ ಚೆನ್ನೈ ತಂಡವು ಐಪಿಎಲ್‌ ಕೂಟದ ಫೈನಲಿಗೇರಿದ ಸಾಧನೆ ಮಾಡಿದೆ. ಈ ವರ್ಷವೇ ಧೋನಿ ಅವರು ತಮ್ಮ ಮಹೋನ್ನತ ಕ್ರಿಕೆಟ್‌ ಬಾಳ್ವೆಯಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂಬ ಊಹಾಪೋಹಗಳೂ ಇವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಧೋನಿ ನಿವೃತ್ತಿಗೆ ಬಹಳಷ್ಟು ಸಮಯವಿದೆ ಎಂದು ತಿಳಿಸಿದ್ದಾರೆ.

ಐಪಿಎಲ್‌ನಿಂದ ಬಹಳಷ್ಟು ಆಯಾಸಗೊಂಡಿ ದ್ದೇನೆ. ಕಳೆದ ನಾಲ್ಕು ತಿಂಗಳಿಂದ ಮನೆಯಿಂದ ಹೊರಗಿದ್ದೇನೆ ಎಂದು ಚಿಪಾಕ್‌ನಲ್ಲಿ ಗೆದ್ದ ಬಳಿಕ ಧೋನಿ ತಿಳಿಸಿದರು. ನಾನು ಇಲ್ಲಿಗೆ ಯಾವಾಗಲೂ ಬರುತ್ತಿದ್ದೇನೆ. ಕಳೆದ ಜನವರಿಯಿಂದ ನಾನು ಮನೆಯಿಂದ ಹೊರಗಿದ್ದೇನೆ. ಕಳೆದ ಮಾರ್ಚ್‌ನಲ್ಲಿ ನಿರಂತರ ಅಭ್ಯಾಸದಲ್ಲಿ ತೊಡಗಿದ್ದೇನೆ. ಅಭ್ಯಾಸದ ಜತೆ ಪಂದ್ಯಗಳಲ್ಲಿ ಆಡುವುದಕ್ಕೆ ಗಮನ ನೀಡುತ್ತಿದ್ದೆ. ಹಾಗಾಗಿ ಏನಾಗುತ್ತದೆ ಎಂಬುದನ್ನು ನೋಡುವ ಎಂದವರು ಹೇಳಿದರು.

“ಜನವರಿ 31ಕ್ಕೆ ನಾನು ಮನೆಯಿಂದ ಹೊರಬಂದಿದ್ದೇನೆ. ನನ್ನ ಕೆಲಸವನ್ನು ಮುಗಿಸಿ ಮಾರ್ಚ್‌ 2ರಿಂದ ಐಪಿಎಲ್‌ಗಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದೆ. ನಿವೃತ್ತಿಯ ಬಗ್ಗೆ ನಿರ್ಧ ರಿಸಲು ಸಾಕಷ್ಟು ಸಮಯವಿದೆ. ನನಗೆ ಗೊತ್ತಿಲ್ಲ. ನನಗೆ ನಿರ್ಧರಿಸಲು 8-9 ತಿಂಗಳಿವೆ. ಈಗ ಆ ತಲೆನೋವು ಏಕೆ ತೆಗೆದುಕೊಳ್ಳಬೇಕು. ನನಗೆ ನಿರ್ಧರಿಸಲು ಸಾಕಷ್ಟು ಸಮಯವಿದೆ. ಹರಾಜು ಡಿಸೆಂಬರ್‌ನಲ್ಲಿದೆ ಎಂದು ಧೋನಿ ತಿಳಿಸಿದರು.

ಸಂಘಟಿತ ಪ್ರಯತ್ನ
ಐಪಿಎಲ್‌ನಲ್ಲಿ ಫೈನಲ್‌ ಹಂತಕ್ಕೇರುವುದು ಅಷ್ಟೊಂದು ಸುಲಭದ ಮಾತಲ್ಲ. ಹತ್ತು ಬಲಿಷ್ಠ ತಂಡಗಳ ಜತೆ ಸಂಘರ್ಷಪೂರ್ಣ ಹೋರಾಟವು ಸುಮಾರು ಎರಡು ತಿಂಗವರೆಗೆ ಸಾಗಿದೆ. ತಂಡದ ಎಲ್ಲರ ಸಂಘಟಿತ ಪ್ರಯತ್ನದಿಂದ ನಾವು ಈ ಹಂತಕ್ಕೇರಲು ಸಾಧ್ಯ ವಾಗಿದೆ. ಅಗ್ರ ಕ್ರಮಾಂಕದ ಆಟಗಾರರು ಅಮೋಘವಾಗಿ ಆಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ ಎಂದು ಧೋನಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next