ಹೊಸದಿಲ್ಲಿ: ಕೋವಿಡ್-19 ಕಾರಣ ಮುಚ್ಚಿರುವ ಈಜುಕೊಳಗಳನ್ನು ಇನ್ನೂ ಅಭ್ಯಾಸಕ್ಕೆ ತೆರೆಯದೇ ಹೋದರೆ ನಿವೃತ್ತಿಯಾಗುವುದೇ ಒಳ್ಳೆಯದೆಂದು ಕಾಣಿಸುತ್ತದೆ ಎಂಬುದಾಗಿ ಏಶ್ಯಾಡ್ ಪದಕ ವಿಜೇತ ಈಜುಪಟು ವೀರ್‌ಧವಳ್ ಖಾಡೆ ಹೇಳಿದ್ದಾರೆ.
ಈಜುಕೊಳಗಳನ್ನು ಮುಚ್ಚಿರುವುದರಿಂದ ಟೋಕಿಯೊ ಒಲಿಂಪಿಕ್ಸ್ ಅಭ್ಯಾಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂಬುದು ಖಾಡೆ ಆತಂಕಕ್ಕೆ ಕಾರಣ.
“ಈಗಾಗಲೇ ಥಾಯ್ಲೆಂಡ್, ಆಸ್ಟ್ರೇಲಿಯ, ಯುಕೆ ಮೊದಲಾದ ಕಡೆ ಸ್ವಿಮ್ಮಿಂಗ್ ಪೂಲ್‌ಗಳನ್ನು ತೆರೆಯಲಾಗಿದೆ, ಅಭ್ಯಾಸಕ್ಕೆ ಅನುಮತಿಯನ್ನೂ ನೀಡಲಾಗಿದೆ. ಆದರೆ ಭಾರತದಲ್ಲಿ ಈಜುಪಟುಗಳು ಮೂರು ತಿಂಗಳಿಂದ ಅಭ್ಯಾಸ ನಡೆಸದೆ ಉಳಿದಿದ್ದಾರೆ’ ಎಂದು ಖಾಡೆ ಹೇಳಿದರು.
ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಈಗಾಗಲೇ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ್ದು, ಕ್ರೀಡಾ ಸಂಕೀರ್ಣದ ಒಳಗಿರುವ ಈಜುಕೊಳಗಳನ್ನು ತೆರೆಯುವಂತೆ ಕೋರಿದೆ.