Advertisement

ಕೆಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ನಿವೃತ್ತಿ ಪ್ರಾಯ 60 ವರ್ಷಕ್ಕೆ ನಿಗದಿ

09:50 AM Aug 21, 2019 | Hari Prasad |

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್.) ಎಲ್ಲಾ ಶ್ರೇಣಿಯ ಸಿಬ್ಬಂದಿ ನಿವೃತ್ತಿ ಪ್ರಾಯವನ್ನು 60 ವರ್ಷಕ್ಕೆ ನಿಗದಿಗೊಳಿಸಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೋಮವಾರದಂದು ಆದೇಶ ಹೊರಡಿಸಿದೆ.

Advertisement

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್.), ಗಡಿ ಭದ್ರತಾ ಪಡೆ (ಬಿ.ಎಸ್.ಎಫ್.), ಇಂಡೋ – ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್.), ಸಶಸ್ತ್ರ ಸೀಮಾ ದಳ (ಎಸ್.ಎಸ್.ಬಿ.) ಮತ್ತು ಅಸ್ಸಾಂ ರೈಫಲ್ಸ್ ನ ಅರೆ ಮಿಲಿಟರಿ ವಿಭಾಗದ ನಿಯಮಿತ ದಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬಂದಿಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ನಿವೃತ್ತಿ ಪ್ರಾಯವು ಆಗಸ್ಟ್ 19ರ ಈ ದಿನದಿಂಲೇ ಅನ್ವಯಗೊಳ್ಳಲಿದೆ.

ಇಂಡೋ – ಟಿಬೆಟಿಯನ್ ಗಡಿ ಭದ್ರತಾ ಪಡೆಯ ಡೆಪ್ಯುಟಿ ಕಮಾಂಡೆಂಟ್ ದೇವ್ ಶರ್ಮಾ ಮತ್ತು ಭಾರತ ಸರಕಾರದ ಮಧ್ಯೆ ಇದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಂದ್ರೀಯ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ಸಿಬಂದಿಗಳಿಗೆ ಸಮಾನ ನಿವೃತ್ತಿ ಪ್ರಾಯವನ್ನು ನಿಗದಿಪಡಿಸುವಂತೆ ಮತ್ತು ಅದು ಅನ್ವಯವಾಗುವ ದಿನಾಂಕವನ್ನೂ ಸಹ ಸ್ಪಷ್ಟವಾಗಿ ನಮೂದಿಸುವಂತೆ ದೆಹಲಿ ಉಚ್ಛ ನ್ಯಾಯಾಲವು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶನ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next