Advertisement

MGM ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊಫೆಸರ್ ರಾಮದಾಸ್ ಭಟ್ ನಿಧನ

11:11 PM Aug 27, 2020 | Hari Prasad |

ಉಡುಪಿ: ಇಲ್ಲಿನ MGM ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊಫೆಸರ್ ಕೆ. ರಾಮದಾಸ್ ಭಟ್ ಅವರು ಇಂದು ನಿಧನ ಹೊಂದಿದ್ದಾರೆ.

Advertisement

ಅವರಿಗೆ 90 ವರ್ಷ ಪ್ರಾಯವಾಗಿತ್ತು. ಭಟ್ ಅವರು ಬೆಳಗಾವಿಯಲ್ಲಿರುವ ತಮ್ಮ ಪುತ್ರನ ಮನೆಯಲ್ಲಿ ನಿಧನ ಹೊಂದಿದ್ದಾರೆ. ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ರಾಮದಾಸ್ ಭಟ್ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ತಮ್ಮ ಅಪಾರ ಶಿಷ್ಯವರ್ಗವನ್ನು ಅಗಲಿದ್ದಾರೆ.

MGM ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಬೋಧನೆ ಮಾಡುತ್ತಿದ್ದ ರಾಮದಾಸ್ ಭಟ್ ಅವರು ವಿಭಾಗ ಮುಖ್ಯಸ್ಥರಾಗಿಯೂ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು.

ಕಾಲೇಜು ಪ್ರಾರಂಭಗೊಂಡ ದಿನಗಳಲ್ಲೇ ಉಪನ್ಯಾಸಕರಾಗಿ ಸೇವೆಗೆ ಸೇರ್ಪಡೆಗೊಂಡಿದ್ದ ಪ್ರೊಫೆಸರ್ ಭಟ್ ಅವರು ದಿವಂಗತ ಕು.ಶಿ.ಹರಿದಾಸ ಭಟ್ಟರ ನಿಕಟವರ್ತಿಯಾಗಿ ಕಾಲೇಜಿನ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.

Advertisement

ಕಾಲೇಜಿನ NCC ನೌಕಾದಳದ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು. ತಮ್ಮ ಸೇವಾ ನಿವೃತ್ತಿಯ ಬಳಿಕ ಇವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಹನಿರ್ದೇಶಕರಾಗಿಯೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

ರಾಮದಾಸ್‌ ಅವರು ಮೂಲತಃ ಕರಂಬಳ್ಳಿಯವರಾಗಿದ್ದರು. ಅವರ ನಿಧನಕ್ಕೆ ನಾಗಾಲ್ಯಾಂಡ್‌ನ‌ ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ, ಶಾಸಕ ಕೆ. ರಘುಪತಿ ಭಟ್‌, ಎಂಜಿಎಂ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಜಿ. ವಿಜಯ್‌, ಪ್ರೊ| ಹೆರಂಜೆ ಕೃಷ್ಣ ಭಟ್‌, ಪ್ರೊ| ಎಂ.ಎಲ್‌. ಸಾಮಗ, ಪ್ರೊ| ಎನ್‌. ಟಿ. ಭಟ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next