Advertisement

ಆರ್ಥಿಕ, ಮಿಲಿಟರಿಯಲ್ಲಿ ಭಾರತ ಸರ್ವಶಕ್ತ: ನಿವೃತ್ತ ಮೇಜರ್‌ ಜ|ಜಿ.ಡಿ.ಬಕ್ಷಿ

11:34 PM Apr 03, 2023 | Team Udayavani |

ಮಂಗಳೂರು: ಆರ್ಥಿಕವಾಗಿ ಹಾಗೂ ಮಿಲಿಟರಿಯಾಗಿ ಭಾರತ ಈಗ ಸರ್ವಶಕ್ತವಾಗಿದೆ ಎಂದು ನಿವೃತ್ತ ಮೇಜರ್‌ ಜ| ಜಿ.ಡಿ. ಬಕ್ಷಿ ಹೇಳಿದರು.

Advertisement

“ನ್ಯೂ ಇಂಡಿಯಾ; ಎ ರೈಸಿಂಗ್‌ ಸೂಪರ್‌ ಪವರ್‌’ ಎಂಬ ವಿಷಯದಲ್ಲಿ ಸಿಟಿಜನ್‌ ಕೌನ್ಸಿಲ್‌ ಮಂಗಳೂರು ಚಾಪ್ಟರ್‌ ವತಿಯಿಂದ ಮಂಗಳೂರು ಪುರಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ನಾವು ಮಿಲಿಟರಿ ಸಂಬಂಧಿತ ಶೇ.70ರಷ್ಟು ವಸ್ತುಗಳನ್ನು ಆಮದು ಮಾಡುವಂತಹ ಪರಿಸ್ಥಿತಿ ಇತ್ತು. ಆದರೆ ಈಗ ಬದಲಾವಣೆ ಆಗುತ್ತಿದೆ. ಮೇಡ್‌ ಇನ್‌ ಇಂಡಿಯಾ ಸಾಕಾರವಾಗುತ್ತಿದೆ. ಸದ್ಯ ದೇಶವು ಜಗತ್ತಿನಲ್ಲೇ ಬಹುಪ್ರಮಾಣದ ಮಿಲಿಟರಿ ಶಕ್ತಿಯಾಗಿ ರೂಪುಗೊಂಡಿದೆ ಎಂದರು.

ಖಲಿಸ್ಥಾನ್‌ ಹೋರಾಟದ ಹಿಂದೆ ಐಎಸ್‌ಐ ಹಾಗೂ ವಿದೇಶದ ಹಲವು ಸಂಘಟನೆಗಳ ಕೈವಾಡ ಸ್ಪಷ್ಟವಾಗಿದೆ. ಪಂಜಾಬ್‌ನಲ್ಲಿ ಡ್ರಗ್ಸ್‌ ಲೋಕವನ್ನೇ ಐಎಸ್‌ಐ ಸೃಷ್ಟಿಸಿದೆ. ಚೀನ ಕೂಡ ಇಲ್ಲಿ ಮೂಗು ತೂರಿಸುತ್ತಿದೆ. ಇದಕ್ಕೆ ಪೂರಕವಾಗಿ ರಾಜಕೀಯ ಲೆಕ್ಕಾಚಾರವೂ ವ್ಯತ್ಯಾಸವಾಗಿ ದೇಶದೊಳಗೆ ವಿಭಜನಕಾರಿ ಶಕ್ತಿ ಬೆಳೆದುಬಂದಿದೆ. ಆದರೆ ಇತ್ತೀಚೆಗೆ ಇದನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದರು.

ಚೀನ ಹಾಗೂ ಪಾಕಿಸ್ಥಾನ ಜತೆಗೂಡಿ ದಾಳಿ ನಡೆಸಿದರೂ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗುತ್ತಿದೆ. ಜಗತ್ತು ಒಂದೆಡೆ ಧ್ರುವೀಕರಣ ಗೊಂಡಿಲ್ಲ. ಬಹುಧ್ರುವೀಕರಣ ಹೊಂದುತ್ತಿದೆ ಎಂದರು.

Advertisement

ಭಾರತೀಯ ಸೇನೆಯು ಹೆಚ್ಚು ಸ್ವಾವಲಂಬಿಯಾಗುತ್ತಿದೆ. ಇದು ಆತ್ಮ ನಿರ್ಭರತೆಯ ಪರಿಕಲ್ಪನೆ ಎಂದ ಅವರು, ಭಾರತವನ್ನು ಟೀಕಿಸುವವರು, ಭಾರತ ದಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿ ಸುವವರ ವಿರುದ್ಧ ಕಿಡಿಕಾರಿದರು.

ಕೆಎಂಸಿ ಯುರೋಲಜಿ ವಿಭಾಗ ಮುಖ್ಯಸ್ಥ ಡಾ|ಜಿ.ಜಿ.ಲಕ್ಷ್ಮಣ್‌ ಪ್ರಭು ಅವರು ಸಂಯೋಜಕರಾಗಿದ್ದರು. ಸಿಟಿಜನ್‌ ಕೌನ್ಸಿಲ್‌ ಅಧ್ಯಕ್ಷ ಡಾ| ಧನೇಶ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಆಶ್ರಿತ್‌ ನೋಂಡ, ಸಂಚಾಲಕ ಡಾ| ಅಭಿಷೇಕ್‌ ಮುಂತಾದವರು ಉಪಸ್ಥಿತರಿದ್ದರು.

ಮೂಡುಬಿದಿರೆಯಲ್ಲೂ ಉಪನ್ಯಾಸ
ಮೂಡುಬಿದಿರೆಯ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲೂ ಸೋಮವಾರ ಬಕ್ಷಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next