Advertisement

ಐ ಸೇವರ್ನಲ್ಲಿ ರೆಟಿನೋಪತಿ ತಪಾಸಣೆ ಯಂತ್ರ

12:29 PM Sep 20, 2017 | |

ಹುಬ್ಬಳ್ಳಿ: ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಣ್ಣಿನ ಒಳಪೊರೆ (ರೆಟಿನೋಪತಿ)ಪತ್ತೆ ಮಾಡುವ ಅತ್ಯಾಧುನಿಕ ಯಂತ್ರವನ್ನು ನಗರದ ಐ ಸೇವರ್ ನೇತ್ರ ತಪಾಸಣೆ ಹಾಗೂ ಕನ್ನಡಕ ಮಾರಾಟ ಮಳಿಗೆ ತರಿಸಿದ್ದು, ದಕ್ಷಿಣ ಭಾರತದಲ್ಲೇ ಈ ಸೌಲಭ್ಯ ಹೊಂದಿದ ಮೊದಲ ಸಂಸ್ಥೆಯಾಗಿದೆ. 

Advertisement

ಜರ್ಮನ್‌ನ ಕಾರ್ಲ್ ಝೈಸ್‌ ಕಂಪನಿ ವಿಸೌಸ್‌ಕೌಟ್‌ ಎಂಬ ನೂತನ ಯಂತ್ರ ಆವಿಷ್ಕಾರಗೊಳಿಸಿದ್ದು, ಇಲ್ಲಿನ ದೇಶಪಾಂಡೆ ನಗರದ ಐ ಸೇವರ್ ಸಂಸ್ಥೆ ಈ ಯಂತ್ರವನ್ನು ಜನರ ಬಳಕೆಗಾಗಿ ಖರೀದಿಸಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಾರ್ಲ್ ಝೈಸ್‌ ಕಂಪೆನಿ ಅಧಿಕಾರಿ ಶ್ರೀನಿವಾಸನ್‌ ಪಾರ್ಥಸಾರಥಿ ಮಾತನಾಡಿ, ಕಾರ್ಲ್ ಝೈಸ್‌ ಕಂಪೆನಿ ಒಟ್ಟು ಆರು ವಿಭಾಗಗಳನ್ನು ಹೊಂದಿದೆ.

ಕ್ಯಾಮೆರಾಗಳಿಗೆ ಬಳಸುವ ಲೆನ್ಸ್‌, ಮೊಬೈಲ್‌, ಲ್ಯಾಪ್‌ಟಾಪ್‌ಗ್ಳಿಗೆ ಬಳಸುವ ಚಿಪ್‌ಗ್ಳನ್ನು ತಯಾರಿಸಲಾಗುತ್ತಿದೆ. ಇತ್ತೀಚೆಗೆ ಭಾರಿ ಯಶಸ್ಸು ಕಂಡ ಬಾಹುಬಲಿ ಸಿನಿಮಾದ ಚಿತ್ರೀಕರಣಕ್ಕೆ ನಮ್ಮ ಕಂಪೆನಿಯ ಲೆನ್ಸ್‌ಗಳನ್ನು ಬಳಸಲಾಗಿದೆ. ಅದೇ ರೀತಿ ನೇತ್ರ ತಪಾಸಣೆ ಸಲಕರಣೆಗಳನ್ನು ಕಂಪೆನಿ ತಯಾರಿಸುತ್ತಿದೆ ಎಂದು ತಿಳಿಸಿದರು.

ರೆಟಿನೋಪತಿ ತಪಾಸಣೆ ಯಂತ್ರ ಈಗಾಗಲೇ ಉತ್ತರ ಭಾರತದಲ್ಲಿ ನಾಲ್ಕು, ಪಶ್ಚಿಮದ ಭಾಗದಲ್ಲಿ ಎರಡು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಗೆ ನೀಡಿದ್ದೇವೆ. ಯಂತ್ರ 4.50ಲಕ್ಷ ರೂ. ವೆಚ್ಚದ್ದಾಗಿದ್ದು, ವಿವಿಧ ಪ್ಯಾಕೇಜ್‌ಗಳೊಂದಿಗೆ ಇದನ್ನು ನೀಡಲಾಗಿದೆ ಎಂದರು. ಐ ಸೇವರ್ನ ಸಿಇಒ ಕುನಾಲ್‌ ಶಾಹ ಮಾತನಾಡಿ, ದೇಶದಲ್ಲಿ ಸುಮಾರು 126 ಮಿಲಿಯನ್‌ನಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.

ಇದರಲ್ಲಿ ಸುಮಾರು 37 ಮಿಲಿಯನ್‌ನಷ್ಟು ಜನರು ದೃಷ್ಟಿ ನಷ್ಟದ ಅಪಾಯದಲ್ಲಿದ್ದಾರೆ. ರೆಟಿನೋಪತಿ ಗೊತ್ತಿಲ್ಲದ ರೀತಿಯಲ್ಲಿ ಅಪಾಯ ತಂದೊಡ್ಡುವುದಾಗಿದೆ. ನಿಯಮಿತ ನೇತ್ರ ತಪಾಸಣೆಯಿಂದ ಸಮಸ್ಯೆ ನಿವಾರಣೆ ಸಾಧ್ಯ. ದೇಶದಲ್ಲಿ ಸುಮಾರು 39 ಮಿಲಿಯನ್‌ನಷ್ಟು ಅಂಧರಿದ್ದು, ಇವರಲ್ಲಿ ಶೇ.80ರಷ್ಟು ಜನರಿಗೆ ಚಿಕಿತ್ಸೆ ಮೂಲಕ ದೃಷ್ಟಿ ನೀಡಬಹುದಾಗಿದೆ ಎಂದು ಹೇಳಿದರು. ಪ್ರಕಾಶ ಶಾಹ, ಮಂಜು, ಪ್ರಸನ್ನ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next