ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿದ ಪರಿಣಾಮ ಕೆಲ ದಿನಗಳಿಂದ ವಾಹನ ಸಂಚಾರ ಬಂದ್ ಆಗಿದ್ದ ರಾಷ್ಟ್ರೀಯ ಹೆದ್ದಾರಿ ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಜುಲೈ 16ರಂದು ಶಿರೂರು ಬಳಿ ಹೆದ್ದಾರಿಯಲ್ಲಿ ಭೀಕರವಾಗಿ ಗುಡ್ಡಕುಸಿತ ಉಂಟಾಗಿ ಮಂಗಳೂರು – ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು.
ಹೆದ್ದಾರಿಯ ಮಧ್ಯೆ ಮಣ್ಣಿನ ರಾಶಿ ಬಿದ್ದು ಮತ್ತು ,11 ಜನ ಕಣ್ಮರೆಯಾಗಿದ್ದರು. ಅದರಲ್ಲಿ 8 ಜನರ ಮೃತದೇಹ ದೊರೆತಿತ್ತು. ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ್ದರು ಅದು ಸಫಲತೆ ಕಾಣದೆ ಹುಡುಕಾಟ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ.
ರಸ್ತೆಯಲ್ಲಿರುವ ಮಣ್ಣು ತೆರವು ಮಾಡಿದ್ದರ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ವಾಹನ ಒಡಾಟಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡದ್ದಾರೆ. ಸದ್ಯಕ್ಕೆ ಹೆದ್ದಾರಿಯ ಮೇಲೆ ಏಕಮುಖ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು ಎರಡು ಬದಿಯಲ್ಲಿ ನಾಪಫಲಕ ಅಳವಡಿಸಲು ಐಆರ್ ಬಿ ಗೆ ಸೂಚಿಸಿದ್ದಾರೆ.
ಇನ್ನೂ ಸಹ ಹೆದ್ದಾರಿಯಲ್ಲಿ ಅಲ್ಲಲ್ಲಿ ಗುಡ್ಡಕುಸಿಯುವ ಆತಂಕ ಇದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡಬೇಕಿದೆ.