Advertisement

ಪಂಚ ರಾಜ್ಯಗಳಲ್ಲಿ ಯಾರಿಗೆ ಪಟ್ಟ? ನಿಜವಾಗಲಿದೆಯೇ ಎಕ್ಸಿಟ್ ಪೋಲ್ ಭವಿಷ್ಯ

07:41 AM Mar 10, 2022 | Team Udayavani |

ಹೊಸದಿಲ್ಲಿ: ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗುತ್ತಾರಾ? ಅಥವಾ ಈ ಬಾರಿ ಅಖಿಲೇಶ್ ಗೆ ಕುರ್ಚಿ ಸಿಗಲಿದೆಯೇ? ಹಲವು ವಿದ್ಯಮಾನಗಳನ್ನು ಕಂಡ ಪಂಜಾಬ್ ನಲ್ಲಿ ಯಾರಿಗೆ ಅಧಿಕಾರ? ಗೋವಾದಲ್ಲಿ ಬಿಜೆಪಿ ತನ್ನ ಓಟ ಮುಂದುವರಿಸುತ್ತಾ? ಉತ್ತರಾಖಂಡ-ಮಣಿಪುರದಲ್ಲಿ ಯಾರಿಗೆ ಜಯ..? ಎಲ್ಲದಕ್ಕೂ ಉತ್ತರ ಮತ ಪೆಟ್ಟಿಗೆಯಲ್ಲಿದೆ.

Advertisement

ಫೆ10ರಿಂದ ಮಾರ್ಚ್ 7ರವರೆಗೆ ನಡೆದ ಮತದಾನದ ಎಣಿಕೆ ಕಾರ್ಯ ಎಂಟು ಗಂಟೆಗೆ ಆರಂಭವಾಗಲಿದೆ. ಇಂದು ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ, ಮಣಿಪುರದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬ ಚಿತ್ರಣ ಸಿಗಲಿದೆ.

ದೇಶದಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್. ಸಂಸತ್ ಗೆಲ್ಲಲು ಉತ್ತರ ಪ್ರದೇಶವೇ ಹೆಬ್ಬಾಗಿಲು. ವಿಧಾನಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಬಿಜೆಪಿ ಪಾಳಯ ತನ್ನೆಲ್ಲಾ ಕಸರತ್ತು ನಡೆಸಿದೆ. ಅಖಿಲೇಶ್ ಯಾದವ್ ಕೂಡಾ ಈ ಬಾರಿ ಪ್ರಯತ್ನ ನಡೆಸಿದ್ದು ಯೋಗಿ-ಯಾದವ್ ಕಾಳಗದಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆಂದು ಕಾದು ನೋಡಬೇಕಾಗಿದೆ.

ರೈತ ಹೋರಾಟದಿಂದ ಬಾರೀ ಸುದ್ದಿಯಾಗಿದ್ದ ಪಂಜಾಬ್ ನಲ್ಲಿ ಈ ಬಾರಿ ಆಪ್ ತನ್ನ ಕರಾಮತ್ತು ಪ್ರದರ್ಶನ ಮಾಡಲಿದೆ ಎಂದು ಎಕ್ಸಿಟ್ ಪೋಲ್ ಗಳು ಭವಿಷ್ಯ ನುಡಿದಿದೆ. ಚರಣ್ ಜಿತ್ ಸಿಂಗ್ ಮತ್ತೆ ಸಿಎಂ ಆಗುತ್ತಾರಾ ಅಥವಾ ಭಗವಂತ್ ಮಾನ್ ಪಂಜಾಬ್ ನ ಮೊದಲ ಆಪ್ ಸಿಎಂ ಆಗುತ್ತಾರಾ ಎಂದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next