Advertisement

ಸಾರ್ವಜನಿಕವಾಗಿ ಹೊಸ ವರ್ಷ ಸಂಭ್ರಮಾಚರಣೆ ಮಾಡುವಂತಿಲ್ಲ: ಉಡುಪಿ ಡಿಸಿ

12:57 PM Dec 27, 2020 | keerthan |

ಉಡುಪಿ: ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವ ಹಾಗಿಲ್ಲ. ಜನರು ತಮ್ಮ ಮನೆಗಳಲ್ಲೇ ಸಂಭ್ರಮಾಚರಣೆ ಮಾಡಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

Advertisement

ಫೇಸ್ ಬುಕ್ ವಿಡಿಯೋದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು, ಕೋವಿಡ್ ಕಾರಣದಿಂದ ಈ ಬಾರಿ ಸರ್ಕಾರ ಹೊಸ ವರ್ಷಾಚರಣೆಗೆ ನಿಯಮಾವಳಿಗಳನ್ನು ಜಾರಿ ಮಾಡಿದೆ. ಈ ನಿಯಮಗಳು ಡಿ.30,31 ಜ.1 ಮತ್ತು 2ರವರೆಗೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಕ್ಲಬ್, ಪಬ್, ಹೋಟೆಲ್ ಗಳು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ. ಸಾರ್ವಜನಿಕರನ್ನು ಸೇರಿಸುವಂತಿಲ್ಲ, ಆಫರ್ ನೀಡುವಂತಿಲ್ಲ. ದಿನನಿತ್ಯದಂತೆ ವ್ಯವಹಾರ ನಡೆಸಬಹುದು ಎಂದರು.

ಇದನ್ನೂ ಓದಿ:ಕೋವಿಡ್ ಸಾಂಕ್ರಮಿಕವೇ ಕೊನೆಯಲ್ಲ, ಪ್ರಸ್ತುತ ಜಗತ್ತು ನಿರ್ಲಕ್ಷ್ಯದಿಂದ ಕೂಡಿದೆ:WHO ಮುಖ್ಯಸ್ಥ

ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವ ಹಾಗಿಲ್ಲ. ಮನೆಗಳಲ್ಲೇ ಹೊಸ ವರ್ಷ ಆಚರಿಸಿ, ಹಸಿರು ಪಟಾಕಿ ಮಾತ್ರ ಬಳಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next