ದಾಂಡೇಲಿ: ಕೋವಿಡ್ ಕಡಿಮೆಯಾಗುತ್ತಿದೆ. ಈ ನಡುವೆ ಅನ್‌ಲಾಕ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಅನುಮತಿ ನೀಡಲಾಗಿದೆ.
ಪ್ರವಾಸೋದ್ಯಮಕ್ಕೂ ಅನುಮತಿ ನೀಡಲಾಗಿದೆ. ಆದರೆ ದಾಂಡೇಲಿ-ಜೊಯಿಡಾ ತಾಲೂಕಿನ ಪ್ರವಾಸೋದ್ಯಮಕ್ಕೆ ಮೂಲ ಆಸರೆಯಾದ ರ್ಯಾಪ್ಟಿಂಗಿಗೆ ಹಾಗೂಜಲಕ್ರೀಡೆಗೆ ಅವಕಾಶ ನೀಡಲಾಗಿಲ್ಲ. ಇದುಪ್ರವಾಸೋದ್ಯಮಕ್ಕೆ ಮಾರಕ ಪರಿಣಾಮ ಉಂಟು ಮಾಡಿದೆ. ಇತ್ತ ಪ್ರವಾಸಿಗರಿಗೂ ಬೇಸರವನ್ನೆ ತಂದಿದೆ.
ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ನಗರ ಹಾಗೂ ಜೊಯಿಡಾ ತಾಲೂಕಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಬಹುಮುಖ್ಯವಾಗಿ ಹೇಳುವುದಾದರೇ ಜಿಲ್ಲೆಯ ಜೀವನದಿ ಕಾಳಿ ನದಿಯಲ್ಲಿ ಗಣೇಶಗುಡಿ ಭಾಗದಲ್ಲಿ ನಡೆಯುವ ರ್ಯಾಪ್ಟಿಂಗ್, ಜಲಸಾಹಸ ಕ್ರೀಡೆ ಪ್ರವಾಸಿಗರ ಅತ್ಯಾಕರ್ಷಣೆಯ ಕೇಂದ್ರ ಬಿಂದು. ಇದರೆ ನಡುವೆ ವಿವಿಧೆಡೆಗಳರೆಸಾರ್ಟ್, ಹೋಂ ಸ್ಟೇಗಳಲ್ಲಿ ನಡೆಯುವವಿವಿಧ ಜಲಕ್ರೀಡೆಗಳೆಂದರೆ ಪ್ರವಾಸಿಗರಿಗೆಅಚ್ಚುಮೆಚ್ಚು. ಹೀಗಾಗಿ ಪ್ರವಾಸಿಗರು ಕಾಳಿ ನೀರಿನ ಮಜ ಅನುಭವಿಸಲೆಂದೆ ಇಲ್ಲಿಗೆ ಪ್ರವಾಸಕ್ಕೆ ಬರುವುದು ವಾಡಿಕೆ.
ಅಂತಹದ್ದರಲ್ಲಿ ಇದೀಗ ಪ್ರವಾಸೋದ್ಯಮಕ್ಕೆ ಅನುಮತಿ ನೀಡಲಾಗಿದ್ದರೂ, ಜಲಕ್ರೀಡೆಗೆ ಅನುಮತಿ ನೀಡಲಾಗಿಲ್ಲ. ಅದರಲ್ಲಿಯೂ ಒಬ್ಬೊಬ್ಬರೇ ಮಾಡಬಹುದಾದ ಜಲಕ್ರೀಡೆಗಳಿಗೂ ಅನುಮತಿ ನೀಡಲಾಗಿಲ್ಲ. ಹಾಗಾಗಿ ಇದೀಗ ಇಲ್ಲಿಯ ಪ್ರವಾಸೋದ್ಯಮ ಮತ್ತೆ ರೋಗಗ್ರಸ್ತವಾಗುವತ್ತ ಹೆಜ್ಜೆಯಿಟ್ಟಿದೆ. ಪ್ರವಾಸೋದ್ಯಮವನ್ನೆ ನಂಬಿ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ.
ಸ್ವದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ಕೂಲಿ ಕೆಲಸವು ದೊರೆತಂತಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದನಗರದಲ್ಲಿ ವ್ಯಾಪಾರ ಚಟುವಟಿಕೆಗಳು ಗರಿಗೆದರಲು ಸಾಧ್ಯವಾಗುತ್ತದೆ. ಇನ್ನೂ ಸಣ್ಣಪುಟ್ಟ ಆಟೋ, ಟ್ರ್ಯಾಕ್ಸಿ ವಾಹನಗಳವರು ಸಹ ಹೊಟ್ಟೆ ತುಂಬಿಸಿಕೊಳ್ಳಲು ಅನುಕೂಲ ಸಿಂಧುವಾಗಿದ್ದು ಇದೇ ಪ್ರವಾಸೋದ್ಯಮ.ಆದರೆ ಜಲಕ್ರೀಡೆಗೆ, ರ್ಯಾಪ್ಟಿಂಗಿಗೆ ಅವಕಾಶನೀಡದಿರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ.ಕೂಡಲೆ ರ್ಯಾಪ್ಟಿಂಗ್ ಹಾಗೂ ಜಲಕ್ರೀಡೆಗೆ ಅನುಮತಿ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
–ಸಂದೇಶ್ ಎಸ್. ಜೈನ್