Advertisement

ಶಿಥಿಲ ಕಟ್ಟಡ ತೆರವಿಗೆ ನಿರ್ಬಂಧ

06:39 AM Jun 29, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಒಟ್ಟು 178 ಶಿಥಿಲಗೊಂಡ ಕಟ್ಟಡಗಳನ್ನು ಗುರುತಿಸಿರುವ ಪಾಲಿಕೆ, ಅವುಗಳಲ್ಲಿ 78 ಕಟ್ಟಡಗಳಿಗೆ ನೋಟಿಸ್‌ ನೀಡಿರುವುದು ಹೊರತುಪಡಿಸಿ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಗರದಲ್ಲಿ  ಮಳೆಯಿಂದ ಇತ್ತೀಚೆಗಷ್ಟೇ ವೃಷ ಭಾವತಿ ವ್ಯಾಲಿಯ ತಡೆಗೋಡೆ ಕೊಚ್ಚಿ ಹೋದ ಬೆನ್ನಲ್ಲೇ ಶಿಥಿಲಗೊಂಡ ಕಟ್ಟಡ ಗಳ ವಿಷಯ ಮುನ್ನೆಲೆಗೆ ಬಂದಿದೆ. 2019ರ ನವೆಂಬರ್‌ನಲ್ಲಿ ನಗರದಲ್ಲಿನ ಶಿಥಿಲ ಕಟ್ಟಡಗಳ ಬಗ್ಗೆ ಬಿಬಿಎಂಪಿ  ಸಮೀಕ್ಷೆ ಮಾಡಿತ್ತು.

Advertisement

ಇದರಲ್ಲಿ ಅಂತಹ 178 ಕಟ್ಟಡಗಳನ್ನು ಗುರುತಿಸಿ, 78 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿದೆ. ನಗರದಲ್ಲಿ ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಗಳನ್ನು ಕೂಡಲೇ ದುರಸ್ತಿಗೊಳಿ ಸಬೇಕು ಅಥವಾ ನೆಲಸಮ ಮಾಡಬೇಕು ಎಂದು ಕಟ್ಟಡ ಗಳ ಸರ್ವೇ ಮಾಡಿದ ವೇಳೆ ಬಿಬಿಎಂಪಿ ಆಯುಕ್ತರು ಆದೇಶ ಮಾಡಿದ್ದರು. ಆದರೆ, ಇದಾಗಿ ಎಂಟು ತಿಂಗಳು ಕಳೆದರೂ ಇದರಲ್ಲಿ ಯಾವುದೇ ಪ್ರಗತಿ ಆಗಿಲ್ಲ.

ವರದಿಯೂ ಅಪೂರ್ಣ: ಶಿಥಿಲ  ಕಟ್ಟಡಗಳ ಮಾಲೀಕರ ಮೇಲೆ ಕ್ರಮವಷ್ಟೇ ಅಲ್ಲ, ಯಾವ ವಲಯದಲ್ಲಿ ಎಷ್ಟು ಶಿಥಿಲ ಕಟ್ಟಡಗಳಿವೆ ಎನ್ನುವ ಬಗ್ಗೆಯೂ ಬಿಬಿಎಂಪಿಯ ಅಧಿಕಾರಿಗಳ ಬಳಿ ಸಮರ್ಪಕ ಮಾಹಿತಿ ಇಲ್ಲ. ಮಹದೇವಪುರ, ಬೊಮ್ಮ ನಹಳ್ಳಿ ಹಾಗೂ ರಾಜರಾಜೇಶ್ವರಿ ನಗರ ಮೂರು ವಲಯಗಳಲ್ಲಿನ ನಿರ್ದಿಷ್ಟ ಶಿಥಿಲ ಕಟ್ಟಡ ಗಳ ಮಾಹಿತಿ ಮಾತ್ರ ನೀಡಿದ್ದಾರೆ. ಉಳಿದ ವಲಯ ಗಳ ಶಿಥಿಲ ಕಟ್ಟಡಗಳ ವರದಿ ಇನ್ನಷ್ಟೇ ಬರಬೇಕಿದೆ ಎನ್ನುತ್ತಾರೆ ಬಿಬಿಎಂಪಿಯ ಅಧಿಕಾರಿಗಳು.

ಸದ್ಯ  ಬಿಬಿಎಂಪಿ ಬಳಿ ಲಭ್ಯವಿರುವ ಮೂರು ವಲಯಗಳಲ್ಲಿ ಸರ್ಕಾರಿ ಕಟ್ಟಡಗಳೂ ಇವೆ. ಈ ಕಟ್ಟಡಗಳನ್ನು ದುರಸ್ತಿ ಮಾಡುವುದು ಅಥವಾ ತೆರವು ಮಾಡುವ ಕೆಲಸವನ್ನೂ ಪಾಲಿಕೆ ಮಾಡಿಲ್ಲ. ಈ ಪೈಕಿ ರಾಜರಾಜೇಶ್ವರಿ ನಗರದಲ್ಲೇ ಅತಿ  ಹೆಚ್ಚು ಶಿಥಿಲ ಕಟ್ಟಡಗಳಿವೆ. ಇವುಗಳಲ್ಲಿ ಬಹುತೇಕ ಕಟ್ಟಡಗಳು ಪಾಲಿಕೆಗೆ ಸೇರಿದವು! ಅದೇ ರೀತಿ, ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು 6 ಶಿಥಿಲ ಕಟ್ಟಡಗಳನ್ನು ಗುರುತಿಸಲಾಗಿದೆ.

ಇವುಗಳಲ್ಲಿ ಮುಖ್ಯವಾಗಿ ಬಿಳೇಕಹಳ್ಳಿ ಯ  ಅಂಗನವಾಡಿ, ಹಳೆಯ ಸಿಎಂಸಿ ಕಟ್ಟಡ, ಹುಳಿಮಾವು ಗುಟ್ಟೆಯ ಹಳೆಯ ಶೌಚಾಲಯ, ಗೊಟ್ಟಿಗೆರೆ ಮತ್ತು ಅಂಜನಾ  ಪುರದ ಸಹಾಯಕ ಕಂದಾಯ ಅಧಿಕಾರಿ ಕಚೇರಿ, ಜಂಬೂಸವಾರಿ ದಿಣ್ಣೆ ಮತ್ತು ತಿಪ್ಪಸಂದ್ರದ ಸಮುದಾಯ ಭವನಗಳು ಶಿಥಿಲಾವಸ್ಥೆ ಕಟ್ಟಡಗಳ ಪಟ್ಟಿಯಲ್ಲಿವೆ. ಮಹದೇವಪುರದಲ್ಲಿ ಎರಡು ಶಿಥಿಲ ಕಟ್ಟಡಗಳನ್ನು ಗುರುತಿಸಲಾಗಿದೆ. ಇದರಲ್ಲಿ ಭಟ್ಟರಹಳ್ಳಿಯ ಪ್ರಾಥಮಿಕ ಶಾಲೆಯೂ ಇದ್ದು, ಇದನ್ನು ತೆರವುಗೊಳಿಸಿ ನಿರ್ಮಿಸಲು ಯೋಜನೆ  ರೂಪಿಸಿಕೊಂಡಿರುವುದಾಗಿ ಪಾಲಿಕೆ ಹೇಳಿದೆ. ಆದರೆ, ಇದು ಕಾರ್ಯರೂಪಕ್ಕೆ ಬಂದಿಲ್ಲ. ಮತ್ತೂಂದು ಶಿಥಿಲ ಕಟ್ಟಡ ಹಳೆ ಮದ್ರಾಸ್‌ ರಸ್ತೆಯಲ್ಲಿದೆ.

Advertisement

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು: ಜಾಲಹಳ್ಳಿ ಬಿಬಿಎಂಪಿ ವ್ಯಾಯಾಮ ಶಾಲೆ, ಸಿದಾಟಛಿರ್ಥನಗರ, ಮುತ್ಯಾಲನಗರ ಹಾಗೂ ವಾರ್ಡ್‌ ಕಚೇರಿ ಪಕ್ಕದ ಬಿಬಿಎಂಪಿಯ ಹೊಲಿಗೆ ತರಬೇತಿ ಕೇಂದ್ರಗಳು, ಯಶವಂತಪುರ ಪಶುವೈದ್ಯಕೀಯ  ಕೇಂದ್ರ, ರೈಲ್ವೆ ಪರ್ಯಾಯ ರಸ್ತೆಯ ಅಂಬೇಡ್ಕರ್‌ ಸಮುದಾಯ ಭವನ, ಬಾಲಕೃಷ್ಣ ರಂಗಮಂದಿರ, ರಾಜೀವ್‌ ಗಾಂಧಿ ಪ್ರಾಥಮಿಕ ಶಾಲೆ, ಗೊರಗುಂಟೆ ಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ (ರಾಜ್‌ಕುಮಾರ್‌ ಪುತ್ಥಳಿ ಸಮೀಪ), ಪೀಣ್ಯ ಎರಡನೇ ಹಂತದ ಸರ್ಕಾರಿ ಮಾದರಿ ಪ್ರೌಢಶಾಲೆ, ನೀರಿನ ಟ್ಯಾಂಕ್‌ ಹೆಮ್ಮಿಗೆಪುರ, ಮಾಳಗಾಳದ ಅಂಗನವಾಡಿ ಕೇಂದ್ರ ಹಾಗೂ ಹಾವಾಡಿಗರ ಕಾಲೊನಿ ಕೊಳಗೇರಿ ಬೋರ್ಡ್‌ ಕಟ್ಟಡಗಳು ಶಿಥಿಲಾವ್ಯವಸ್ಥೆಯಲ್ಲಿ ಇವೆ ಎಂದು  ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next