ಹುಣಸೂರು: ತಾಲೂಕಿನ ಕರೀಮುದ್ದನಹಳ್ಳಿಯ 13 ವರ್ಷದ ಬಾಲಕಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಬಾಲಕಿಯ ಮನೆ ಸುತ್ತಮುತ್ತ ಕಂಟೈನ್ಮೆಂಟ್ ಝೋನ್ ಹಾಗೂ ಚಿಕಿತ್ಸೆ ಪಡೆದಿದ್ದ ಗದ್ದಿಗೆಯ ಖಾಸಗಿ ಕ್ಲಿನಿಕ್ ಸೀಲ್ ಡೌನ್ ಮಾಡಲಾಗಿದೆ.
ಈ ಬಾಲಕಿ ಮೈಸೂರು ತಾಲೂಕಿನ ಸಂಬಂಧಿಕರ ಮನೆಯಿಂದ ಜೂ.24ರಂದು ಗ್ರಾಮಕ್ಕೆ ಆಗಮಿಸಿದ್ದು, ಬರುವಾಗಲೇ ಜ್ವರ ಕಾಣಿಸಿಕೊಂಡ ವೇಳೆ ಸಮೀಪದ ಗದ್ದಿಗೆಯಲ್ಲಿರುವ ಸೂರ್ಯ ಕ್ಲಿನಿಕ್‌ನಲ್ಲಿ ಅಂದೇ ಚಿಕಿತ್ಸೆ ಪಡೆದು, ಹುಷಾರಾಗದೇ ಜೂ.25ರಂದು ಎಚ್.ಡಿ.ಕೋಟೆ ಸೇಂಟ್ ಮೇರಿಸ್ ಆಸ್ಪತ್ರೆಗೆ ದಾಖಲಾ ಗಿದ್ದರು. ಆದರೂ ಪ್ರಯೋಜನವಾಗದೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ ವೇಳೆ ಕೋವಿಡ್ ಟೆಸ್ಟ್ ನಡೆಸಿದ್ದು, ಕೋವಿಡ್ 19 ದೃಢಪಟ್ಟಿದ್ದರಿಂದ ಬಾಲಕಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ನೀಡಿ: ಈಕೆಯ ತಂದೆ ಕ್ಷೌರಿಕರಾಗಿದ್ದು, ಆ ದಿನಗಳಲ್ಲಿ ಇವರು ತಾಲೂಕಿನ ಗದ್ದಿಗೆ, ಅಸ್ವಾಳು, ಮಾದಾಪುರ, ಎಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಹಾಗೂ ಅಂತರಸಂತೆ ಗ್ರಾಮಗಳಲ್ಲಿ ಅನೇಕರಿಗೆ ಕ್ಷೌರ ಮಾಡಿದ್ದರೆನ್ನಲಾಗಿದೆ. ಸೂರ್ಯಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದಿರುವವರು ಹಾಗೂ ಕ್ಷೌರ ಮಾಡಿಸಿಕೊಂಡಿರು ವವರನ್ನು ಕ್ವಾರಂಟೈನ್ ಮಾಡಬೇಕಾಗಿದೆ.
ಸಂಪರ್ಕಿತರು ಆರೋಗ್ಯ ದೃಷ್ಟಿಯಿಂದ ಮೊ: 8197823245, 96116 68571 ಇಲ್ಲಿಗೆ ಸಂಪರ್ಕಿಸಬೇಕೆಂದು ತಹಶೀಲ್ದಾರ್ ಬಸವರಾಜ್ ಮನವಿ ಮಾಡಿದ್ದಾರೆ. ಚಿಕಿತ್ಸೆ ನೀಡಿರುವ ಮೈಸೂರಿನ ವೈದ್ಯೆ, ದಾದಿ ಸ್ಥಳವನ್ನು ಕಂಟೈನ್ಮೆಂಟ್ ಝೋನ್‌ನ ಮಾಡಿ ಅವರು ಹಾಗೂ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಸೋಮವಾರ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.
ಅಧಿಕಾರಿಗಳ ದೌಡು: ಗ್ರಾಮಕ್ಕೆ ತಹಶೀಲ್ದಾರ್ ಬಸವರಾಜ್, ಇಒ ಗಿರೀಶ್, ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಗ್ರಾಮಸ್ಥರು ಕಡ್ಡಾಯವಾಗಿ ಕೊವಿಡ್-19 ಮಾರ್ಗಸೂಚಿ ಗಳನ್ನು ಪಾಲಿಸಬೇಕೆಂದು ಸೂಚಿಸಿದರು.