Advertisement

ಗೋಮಾಳದಲ್ಲಿ ಕಾಮಗಾರಿಗೆ ತಡೆ

03:31 PM Jul 19, 2018 | |

ಬೇತಮಂಗಲ: ಗೋಮಾಳದಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಲು ಮೀಸಲಿಟ್ಟಿದ್ದ 4 ಎಕರೆ ಜಮೀನನ್ನು ಜಿಪಂ ಮಾಜಿ
ಸದಸ್ಯರೊಬ್ಬರು ವಿಂಗಡಣೆ ಮಾಡುತ್ತಿದ್ದನ್ನು ತಡೆದ ಗ್ರಾಮಸ್ಥರು, ಆ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡಿರುವ ಘಟನೆ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಪಟ್ಟಣದ ಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದ ಗೋಮಾಳ ಜಮೀನಿನಲ್ಲಿ 4 ದಿನಗಳಿಂದ ವಿವಿಧ ಚಟುವಟಿಕೆಗಳು ಗರಿಗೆದರಿವೆ. ಆದರೂ, ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ: ಚೆಕ್‌ ಡ್ಯಾಂ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಸಿಕೊಂಡು ಸರ್ಕಾರಿ ಜಮೀನು ಕಬಳಿಸುವ ಉದ್ದೇಶದಿಂದ ಸುಮಾರು 4.20ಎಕರೆ ಜಾಗದಲ್ಲಿ 2 ಎಕರೆಯಷ್ಟು ಜಮೀನನ್ನು ಜೆಸಿಬಿ ಮೂಲಕ ವಿಂಗಡಣೆ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ವಿಗಂಡಣೆ ಮಾಡಲಾಗುತ್ತಿತ್ತು. 

ಇದನ್ನು ಗಮನಿಸಿದ ಗ್ರಾಮಸ್ಥರು ವಿಂಗಡಣೆ ಮಾಡದಂತೆ ತಡೆದರು. ಆಗ ಜಿಪಂ ಮಾಜಿ ಸದಸ್ಯರು ಗ್ರಾಮಸ್ಥರಿಗೆ ಅನುಕೂಲ ವಾಗಲೆಂದು ಚೆಕ್‌ ಡ್ಯಾಂ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆ. ನಿಮಗೆ ತೊಂದರೆಯಾಗುತ್ತದೆ ಎಂದಾದರೆ ಬೇಡವೆಂದು ಹೇಳಿದರು.

ಬಿಗುವಿನ ವಾತಾವರಣ ಸೃಷ್ಟಿ: ಅಂದಾಜು 4.20 ಎಕರೆ ಜಾಗದಲ್ಲಿ ಸರ್ಕಾರ ಅರಣ್ಯ ಇಲಾಖೆಯಿಂದ ನೀಲಗಿರಿ ಮರಗಳನ್ನು ನೆಟ್ಟಿತ್ತು. ಇತ್ತೀಚೆಗೆ ಅವುಗಳನ್ನು ಕಟಾವು ಮಾಡಲಾಗಿತ್ತು. ಇದೇ ವೇಳೆಗೆ ಅಲ್ಲಿನ ರೈತರಿಗೆ ಅನುಕೂಲವಾಗುವಂತೆ ಚೆಕ್‌ ಡ್ಯಾಂ ನಿರ್ಮಾಣ ಮಾಡಲು 2 ಎಕರೆಯಷ್ಟು ಜಮೀನನ್ನು ವಿಂಗಡಣೆ ಮಾಡುತ್ತಿರುವುದನ್ನು ಕಂಡ ಗ್ರಾಮಸ್ಥರು ಜಿಸಿಬಿಯನ್ನು ತಡೆದರು. ಇದರಿಂದ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

Advertisement

ಕೈಕಟ್ಟಿ ಕುಳಿತ ಕಂದಾಯ ಅಧಿಕಾರಿಗಳು: ಈ ಸರ್ಕಾರಿ ಗೋಮಾಳದಲ್ಲಿ ಸುಮಾರು 100ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕೊಂಡು ಕುಳಿತಿರುವುದು ಚರ್ಚೆಗೆ ಗ್ರಾಸವಾಗಿದೆ. 

ಬೇತಮಂಗಲ- ಕೋಲಾರ ಮುಖ್ಯ ರಸ್ತೆಯಲ್ಲೇ ನಡೆಯುತ್ತಿದ್ದ ಈ ಘಟನೆಯನ್ನು ದಾರಿ ಹೋಕರು ನಿಂತು ನೋಡುತ್ತಿದ್ದುದು
ಸಾಮಾನ್ಯವಾಗಿತ್ತು.  

ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಬೇತಮಂಗಲ ಬಳಿಯ ಟಿ.ಗೊಲ್ಲಹಳ್ಳಿ ಗ್ರಾಮಸ್ಥರು ತಮ್ಮ ನಿವೇಶನದ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಗಮನ ಹರಿಸಿಲ್ಲ. ಸ್ವಂತ ಮನೆಗಳಿಲ್ಲದ ತಾವು ಗುಡಿಸಲು ನಿರ್ಮಿಸಿಕೊಂಡು ಜೀನವ ನಡೆಸುತ್ತಿದ್ದೇವೆ. ಆದ್ದರಿಂದ, ತಮಗೆ ನಿವೇಶನಗಳನ್ನು ಹಂಚಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಅನುವು ಮಾಡಬೇಕೆಂದು ಸ್ಥಳಿಯ ಸೂರುರ

ಬಂಗಾರಪೇಟೆ ತಾಲೂಕು ಬೇತಮಂಗಲ ಬಳಿಯ ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಗೋಮಾಳ ವನ್ನು ಜಿಪಂ ಮಾಜಿ ಸದಸ್ಯರು ಕಬಳಿಸುವ ಪ್ರಯತ್ನ ಮಾಡಿರುವುದು ಮತ್ತು ಗ್ರಾಮಸ್ಥರು ಗುಡಿಸಲು ನಿರ್ಮಿಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಡಲೇ ಗ್ರಾಪಂ ಪಿಡಿಒರಿಂದ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ಜರುಗಿಸುತ್ತೇನೆ.
  ಸುಭಾನ್‌, ತಾಪಂ ಇಒ, ಬಂಗಾರಪೇಟೆ

ಕೆ.ಆರ್‌. ಪುರುಷೋತ್ತಮರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next