Advertisement

ಕ್ರಮ ಸಮರ್ಥನಿಯವಲ್ಲ;ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್,ಆರೋಗ್ಯ ಸೇವೆ ಪುನರಾರಂಭಿಸಿ; ಸುಪ್ರೀಂ

10:07 AM Jan 11, 2020 | Nagendra Trasi |

ನವದೆಹಲಿ: 370ನೇ ವಿಧಿ ರದ್ದುಗೊಳಿಸಿದ ನಂತರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಹಾಗೂ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಇಂಟರ್ನೆಟ್ ಸೇವೆ ಪಡೆಯುವುದು ಮೂಲಭೂತ ಹಕ್ಕಾಗಿದೆ. ಅಲ್ಲದೇ ಇಂಟರ್ನೆಟ್ ಸೇವೆ, ಇ-ಬ್ಯಾಂಕಿಂಗ್ ಮತ್ತು ವ್ಯಾಪಾರ ವಹಿವಾಟು ಪುನರಾರಂಭಿಸುವಂತೆ ಶುಕ್ರವಾರ ಆದೇಶ ನೀಡಿದೆ.

Advertisement

ನ್ಯಾ.ರಮಣ್ ನೇತೃತ್ವದ ಪೀಠ, ಜಮ್ಮು-ಕಾಶ್ಮೀರ ಆಡಳಿತ ಒಂದು ವಾರದೊಳಗೆ ಎಲ್ಲಾ ನಿರ್ಬಂಧ ಆದೇಶಗಳ ಬಗ್ಗೆ ಪುನರ್ ವಿಮರ್ಶಿಸಬೇಕೆಂದು ಆದೇಶ ನೀಡಿದೆ. ಅಷ್ಟೇ ಅಲ್ಲ ಎಲ್ಲಾ ಆದೇಶಗಳನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ನಂತರ ಅಗತ್ಯಬಿದ್ದರೆ ಕಾನೂನು ಪ್ರಕಾರ ಅದನ್ನು ಕೋರ್ಟ್ ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ತುರ್ತುಪರಿಸ್ಥಿತಿಯಂತಹ ಕ್ರಮವನ್ನು ಸಮರ್ಥಿಸಿಕೊಳ್ಳಲಾಗದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದ್ದು, ಆರೋಗ್ಯ, ಶಿಕ್ಷಣ , ಇಂಟರ್ನೆಟ್ ಸೇರಿದಂತೆ ಪ್ರಮುಖ ಸೇವೆಗಳನ್ನು ಕೂಡಲೇ ಪುನರ್ ಆರಂಭಿಸುವಂತೆ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next