Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶೇಷ ಭಾರತ ಸಾಧಾರಣ ಆರಂಭ ಪಡೆಯಿತು. ತಂಡದ ಮೊತ್ತ 46 ರನ್ ಆಗುವಷ್ಟರಲ್ಲಿ ಆರಂಭಿಕ ಆಟಗಾರ ಅನ್ಮೋಲ್ ಪ್ರೀತ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಅನ್ಮೋಲ್ ಗಳಿಕೆ ಕೇವಲ 15. ಎರಡನೇ ವಿಕೆಟ್ ಗೆ ಜೊತೆಯಾದ ಮಯಾಂಕ್ ಮತ್ತು ಹನುಮ ವಿಹಾರಿ 125 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ನಾಯಕ ಅಜಿಂಕ್ಯ ರಹಾನೆ (13), ಶ್ರೇಯಸ್ ಅಯ್ಯರ್( 19) ದೊಡ್ಡ ಮೊತ್ತವನ್ನು ಕಲೆಹಾಕಲು ವಿಫಲರಾದರು. ವಿಕೆಟ್ ಕೀಪರ್ ಇಶಾನ್ ಕಿಶನ್ (2) ಕರ್ನಾಟಕದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್ (7 ) ಸಂಪೂರ್ಣ ವಿಫಲರಾದರು. ಎಂಟನೇ ವಿಕೆಟ್ ರೂಪದಲ್ಲಿ ಔಟ್ ಆದ ಹನುಮ ವಿಹಾರಿ 211 ಎಸೆತ ಎದುರಿಸಿ 114 ರನ್ ಗಳಿಸಿ ಸರ್ವಾಟೆಗೆ ವಿಕೆಟ್ ಒಪ್ಪಿಸಿದರು.
ಶೇಷ ಭಾರತ ತಂಡ ಈ ಸಾಲಿನ ರಣಜಿ ಋತುವಿನ ಯಶಸ್ವಿ ಆಟಗಾರರಾದ ಸ್ನೆಲ್ ಪಟೇಲ್ ಮತ್ತು ರೋನಿತ್ ಮೋರೆಯನ್ನು ಬೆಂಚ್ ಕಾಯಿಸಿದರೆ ವಿದರ್ಭ ತಂಡ ದೇಶಿ ಕ್ರಿಕೆಟ್ ನ ಚಾಂಪಿಯನ್ ಆಟಗಾರ ವಸೀಂ ಜಾಫರ್ ರನ್ನು ಆಡುವ ಬಳಗದಿಂದ ಕೈ ಬಿಟ್ಟಿತು.