Advertisement

ಸಫಾಯಿ ಕರ್ಮಚಾರಿಗಳ ಸಮಸ್ಯೆಗೆ ಸ್ಪಂದಿಸಿ

01:48 PM Feb 10, 2021 | Team Udayavani |

ದೇವನಹಳ್ಳಿ: ಜೀತ ವಿಮುಕ್ತರ, ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್‌ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಜಿಪಂ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ ರಾಜ್‌ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜೀತ ವಿಮುಕ್ತರ, ಸಫಾಯಿ ಕರ್ಮ ಚಾರಿ ಗಳ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೀತ ವಿಮುಕ್ತರಿಗೆ ಹಾಗು ಸಫಾಯಿ ಕರ್ಮ ಚಾರಿಗಳಿಗೆ ನರೇಗಾ ಮತ್ತು ವಸತಿ ಯೋಜನೆಗಳಲ್ಲಿ ಮೊದಲ ಪ್ರಾಮುಖ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಯಾರಾದರೂ ಅರ್ಜಿ ಹಿಡಿದು ಬಂದಲ್ಲಿ, ಮೊದಲ ಪ್ರಾಮುಖ್ಯತೆಯನ್ನು ಸಫಾಯಿ ಕರ್ಮಚಾರಿಗಳಿಗೆಅಧಿಕಾರಿಗಳು ನೀಡಬೇಕು. ಸರ್ಕಾರ ಸಫಾಯಿಕರ್ಮ ಚಾರಿ ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಸಿಗುವಂತಹ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬನೆಯ ಜೀವನವನ್ನು ಕಟ್ಟಿಕೊಳ್ಳುವಂತಾಗಬೇಕುಎಂದರು.

ಮಲಹೊರುವ ಪದ್ಧತಿ ನಿಷೇಧ: ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, 2013ರ ಅಡಿಯಲ್ಲಿ ಮಲಹೊರುವ ಪದ್ಧತಿ ನಿಷೇಧಮಾಡಿದೆ. ನೈರ್ಮಲ್ಯ ರಹಿತ ಶೌಚಾಲಯ ಅಥವಾತೆರೆದ ಚರಂಡಿ ಅಥವಾ ಗುಂಡಿಯಲ್ಲಿರುವ ಮಲಮೂತ್ರವನ್ನು ಅದು ಸಂಪೂರ್ಣವಾಗಿ ಕೊಳೆಯುವಮುಂಚೆಯೇ ದೈಹಿಕವಾಗಿ ಸ್ವಚ್ಛಗೊಳಿಸಲು, ಸಾಗಿ ಸಲು, ತೆಗೆದು ಹಾಕಲು ಅಥವಾ ಅದನ್ನು ಯಾವುದೇ ರೀತಿಯಲ್ಲಿ ನಿರ್ವಹಿಸುವ ಸ್ಥಳೀಯ ಪ್ರಾಧಿಕಾರದಿಂದ ಅಥವಾ ಗುತ್ತಿದಾರರಿಂದ ನೇಮಕ ಗೊಂಡಿರುವ ವ್ಯಕ್ತಿಗಳು. ರಾಜ್ಯಾದ್ಯಂತ ಜೀತ ವಿಮು ಕ್ತರ ಮತ್ತು ಸಫಾಯಿ ಕರ್ಮಚಾರಿಗಳ ಸರ್ವೇ ಕಾರ್ಯ ನಡೆಯುತ್ತಿದೆ ಎಂದರು.

ಮನೆ ಕಟ್ಟಿಕೊಳ್ಳಲು ಅನುದಾನ: ಸಫಾಯಿ ಕರ್ಮಚಾರಿಗಳು ಮನೆ ಕಟ್ಟಿಕೊಳ್ಳಲು ಗ್ರಾಮೀಣ ಭಾಗದಲ್ಲಿ ಮೂರುವರೆ ಲಕ್ಷ ಹಾಗೂ ನಗರ ಪ್ರದೇಶದಲ್ಲಿ ಐದುವರೆ ಲಕ್ಷ ರೂ. ಅನುದಾನವನ್ನು ನೀಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.

Advertisement

ಲೀಡ್‌ಬ್ಯಾಂಕ್‌ ವ್ಯವಸ್ಥಾಪಕ ಮಧುಸೂದನ್‌, ದೇವನಹಳ್ಳಿ ತಾಪಂ ಇಒ ಎಚ್‌.ಡಿ.ವಸಂತ್‌ಕುಮಾರ್‌, ದೊಡ್ಡಬಳ್ಳಾಪುರ ತಾಪಂ ಇಒ ಟಿ.ಮುರಡಯ್ಯ, ಹೊಸಕೋಟೆ ತಾಪಂ ಇಒ ಶ್ರೀನಾಥ್‌ ಗೌಡ, ನೆಲಮಂಗಲ ತಾಪಂ ಇಒ ಲಕ್ಷ್ಮೀನಾರಾಯಣಸ್ವಾಮಿ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕನರಸಿಂಹಮೂರ್ತಿ, ದೇವರಾಜು ಅರಸು ಅಭಿವೃದ್ಧಿನಿಗಮದ ವ್ಯವಸ್ಥಾಪಕಿ ಸುಜಾತಾ, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್‌.ನಾಗರಾಜ್‌,ಸಫಾಯಿ ಕರ್ಮಚಾರಿ ಸಮಿತಿಯ ಜಿಲ್ಲಾ ಸಂಚಾಲಕ ಮ್ಯಾಥ್ಯು ಮುನಿಯಪ್ಪ, ಮೀನುಗಾರಿಕೆ ಉಪನಿರ್ದೇಶಕ ನಾಗರಾಜ್‌, ಸಮಾಜ ಕಲ್ಯಾಣ ಇಳಾಖೆ ತಾಲೂಕು ಸಹಾಯಕ ನಿರ್ದೇಶಕ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌, ನಾಲ್ಕು ತಾಲೂಕಿನ ಪಿಡಿಒಗಳು ಇದ್ದರು.

ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ; ಸಾರ್ವಜನಿಕರು ಸ್ಥಳೀಯ ಸಂಸ್ಥೆಗಳನ್ನು ಸಂಪರ್ಕಿಸಿ ಯಂತ್ರಗಳ ಮೂಲಕ ಮಲಗುಂಡಿಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು. ಅನಾದಿಕಾಲದಿಂದ ದೇಶದಲ್ಲಿ ನಡೆದುಕೊಂಡು ಬಂದ ಮಲ ಹೊರುವ ಅನಾಗರಿಕ ಪದ್ಧತಿ ಈ ದಿನದಿಂದಲೇ ಅಂತ್ಯವಾಗಲಿ. ಎಸ್‌ಸಿ, ಎಸ್‌ಟಿ ಇಲಾಖೆಗಳು ಒಳಗೊಂಡಂತೆ ಎಲ್ಲ ವಿವಿಧ ಇಲಾಖೆಗಳು ಜೀತ ವಿಮುಕ್ತರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಬರುವ ಸೌಲಭ್ಯಕಡ್ಡಾಯವಾಗಿ ನೀಡಬೇಕು ಎಂದು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್‌. ರವಿಕುಮಾರ್‌ ಹೇಳಿದರು.

5 ಲಕ್ಷ ರೂ. ದಂಡ :

ಮಲಹೊರುವ ಕೆಲಸ ಮಾಡಿಸಿದವರಿಗೆ ಮೊದಲ ಹಂತದಲ್ಲಿ ಉಲ್ಲಂಘನೆ ಮಾಡಿದರೆ, 50 ಸಾವಿರರೂ. ದಂಡ, 1 ವರ್ಷ ಜೈಲು ಶಿಕ್ಷೆ ಹಾಗೂಎರಡನೇ ಬಾರಿ ಅದೇ ತಪ್ಪನ್ನು ಪುನರಾವರ್ತನೆಮಾಡಿದರೆ, 1 ಲಕ್ಷ ರೂ. ದಂಡ, 2 ವರ್ಷ ಜೈಲು,ಮೂರನೇ ಬಾರಿ ಅದೇ ತಪ್ಪನ್ನು ಮಾಡಿದರೆ, 5ಲಕ್ಷ ರೂ. ದಂಡ, 5 ವರ್ಷ ಶಿಕ್ಷೆಗೆಗುರಿಯಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next