Advertisement

ಗ್ರಾಮೀಣರ ಸಮಸ್ಯೆಗೆ ಸ್ಪಂದಿಸುವೆ

07:35 AM May 19, 2020 | Lakshmi GovindaRaj |

ಭಾರತೀನಗರ: ಸಮೀಪದ ಕೆ.ಶೆಟ್ಟಹಳ್ಳಿ ಮತ್ತು ಕಾಡುಕೊತ್ತನಹಳ್ಳಿಗಳಲ್ಲಿ ಎಸ್‌ಇಪಿ ಯೋಜನೆಯಲ್ಲಿ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಡ್ರೆçನೇಜ್‌ ಕಾಮಗಾರಿಗೆ ಶಾಸಕ ಡಿ.ಸಿ.ತಮ್ಮಣ್ಣ ಭೂಮಿಪೂಜೆ ನೆರವೇರಿಸಿದರು.  ಬಳಿಕ ಮಾತನಾಡಿದ ಅವರು, ಶೆಟ್ಟಹಳ್ಳಿ ಗ್ರಾಮಕ್ಕೆ 44.43 ರೂ., ಕಾಡುಕೊತ್ತನಹಳ್ಳಿ ಗ್ರಾಮಕ್ಕೆ 44.54 ಲಕ್ಷ ರೂ. ಒಟ್ಟು 88.97 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಡ್ರೆçನೇಜ್‌ ಕಾಮಗಾರಿಗೆ ಚಾಲನೆ ನೀಡಿದ್ದೇನೆ.

Advertisement

ರಸ್ತೆಗಳ  ಅಭಿವೃದಿಟಛಿ ಜೊತೆಗೆ ಕ್ಷೇತ್ರಕ್ಕೆ ಅಗತ್ಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದೇನೆ. ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಗುಣಮಟ್ಟದ ಕಾಮಗಾರಿ ನಡೆಸಲು ಅರಿವು ಮೂಡಿಸಬೇಕು. ಉದ್ದೇಶಿತ ಕಾಮಗಾರಿಯ ಅಂದಾಜು ವೆಚ್ಚ ಸೇರಿದಂತೆ ತಾಂತ್ರಿಕ ವಿಷಯಗಳನ್ನು ಸ್ಥಳೀಯ ಜನರಿಗೆ ಈ ಮೊದಲೇ ತಿಳಿಸಬೇಕು. ಇದು ಕಾಮಗಾರಿಯ ಗುಣ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ ಎಂದರು.

ಗ್ರಾಮಗಳ ಅಭಿವೃದಿ ಕಾರ್ಯಗಳಿಗೆ ಸರ್ಕಾರ ಹಲವಾರು ರೀತಿಯಲ್ಲಿ ಅನುದಾನ  ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತನ್ನ ಅಧಿಕಾರ ಅವಧಿಯಲ್ಲಿ ದ್ವೇಷ ಅಸೂಯೆ ಇಲ್ಲದೇ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ತೆರಳಿ ಕಷ್ಟ-ಸುಖಗಳಿಗೆ ಭಾಗಿಯಾಗಿದ್ದೇನೆ. ತನ್ನ ಅಧಿಕಾರಕ್ಕೆ ಯಾವುದೇ  ಚ್ಯುತಿಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆಂದು ತಿಳಿಸಿದರು.

ಈ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಸಹಾಯಕ ಎಂಜಿನಿಯರ್‌ ಪ್ರವೀಣ್‌, ಪ್ರಕಾಶ್‌, ಎಇ ವೇಣುಗೋಪಾಲ್‌, ಶೆಟ್ಟಹಳ್ಳಿ ಮರಿಸ್ವಾಮಿ, ಶಿವಲಿಂಗ,  ಶಿವರಾಜು, ಗುತ್ತಿಗೆದಾರ ಚನ್ನಯ್ಯ, ಮಾದೇಗೌಡ, ಎಸ್‌.ಮಹೇಂದ್ರ, ನಂಜುಂಡಯ್ಯ, ಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next