Advertisement

ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ಸ್ಪಂದನೆ: ಮಾನವೀಯತೆ ಮೆರೆದ ಪೊಲೀಸರು

06:45 AM Aug 04, 2018 | Team Udayavani |

ಕುಂದಾಪುರ: ಹೆಮ್ಮಾಡಿ ಪರಿಸರದಲ್ಲಿ ಅನುಮಾನಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲಿಸರು ಠಾಣೆಗೆ ಕರೆತಂದು ವಿಚಾರಿಸಿದಾಗ ಮಾನಸಿಕ ಅಸ್ವಸ್ಥನೆಂದು ತಿಳಿದ ಬಳಿಕ ಆತನ ಚಿಕಿತ್ಸೆಗೆ ನೆರವಾಗುವ ಮೂಲಕ ಕುಂದಾಪುರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

Advertisement

ಬೆಳಗಾವಿ ಮೂಲದ ಉಮೇಶ್‌ ಗೌಡರ್‌ (24) ಎಂಬಾತ ಗುರುವಾರ ಬೆಳಗ್ಗೆ ಹೆಮ್ಮಾಡಿ ಪರಿಸರದಲ್ಲಿ ಅಲೆದಾಡುತ್ತಿದ್ದಾಗ ಸಾರ್ವಜನಿಕರ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಕರೆದೊಯ್ದಿದ್ದು, ಎಸ್‌ಐ ಹರೀಶ್‌ ಆರ್‌. ನಾಯ್ಕ ವಿಚಾರಣೆಗೊಳಪಡಿಸಿದಾಗ ಆತನೊಬ್ಬ ಮಾನಸಿಕ ಅಸ್ವಸ್ಥ ಎಂಬುದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಗ್ಯ ಇಲಾಖೆ ಸಹಕಾರದಲ್ಲಿ ಧಾರವಾಡದ ಡಿಮ್ಯಾನ್ಸ್‌ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲು ತಯಾರಿ ಮಾಡಿದ್ದಾರೆ. ಜತೆಗೆ ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಅವರ ಗಮನಕ್ಕೆ ತಂದಿದ್ದಾರೆ. 

ಬಳಿಕ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯಲ್ಲಿ ಮಾನಸಿಕ ರೋಗ ತಜ್ಞರ ಮೂಲಕ ತಪಾಸಣೆ ನಡೆಸಿ ಸರ್ಟಿಫಿಕೇಟ್‌ ಪಡೆಯಲಾಗಿದೆ.ಕೆಲ ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಗುರುವಾರ ಉಮೇಶಗೆ ಪುನರ್ವಸತಿ ಕಲ್ಪಿಸಿ ಶುಕ್ರವಾರ ಬೆಳಗ್ಗೆ ಧಾರವಾಡದಲ್ಲಿರುವ ಡಿಮ್ಯಾನ್ಸ್‌ ಆಸ್ಪತ್ರೆಗೆ ಕರೆದೊಯ್ಯಲು ಆತನನ್ನು ಪೊಲೀಸರ ಸುಪರ್ದಿಯಲ್ಲಿ ಇರಿಸಲಾಗಿದೆ. ಡಿವೈಎಸ್ಪಿ ದಿನೇಶ್‌ ಕುಮಾರ್‌, ಕುಂದಾಪುರ ಎಸ್‌ಐ ಹರೀಶ್‌ ಆರ್‌. ನಾಯ್ಕ ಮಾರ್ಗ ದರ್ಶನದಂತೆ ಎ.ಎಸ್‌.ಐ ಸುಧಾಕರ, ತಾರಾನಾಥ, ಸುಧಾ ಪ್ರಭು, ಹೆಡ್‌ಕಾನ್‌ಸ್ಟೆàಬಲ್‌ ವೆಂಕಟರಮಣ, ಸುಬ್ಬಣ್ಣ ಶೆಟ್ಟಿ, ಜಗನ್ನಾಥ, ಸಿಬಂದಿ ಮಂಜುನಾಥ್‌, ಪ್ರವೀಣ್‌ ಕುಮಾರ್‌ ಉಮೇಶ್‌ ಚಿಕಿತ್ಸೆಗೆ ನೆರವಾಗಿದ್ದಾರೆ. 

ಧಾರವಾಡಕ್ಕೆ ರವಾನೆ
ನ್ಯಾಯಾಲಯದ ಅನುಮತಿ ಪಡೆದುಕೊಂಡು ಶುಕ್ರವಾರ ಉಮೇಶನನ್ನು ಕುಂದಾಪುರದ ಇಬ್ಬರು ಪೊಲೀಸ್‌ ಸಿಬಂದಿಯೊಂದಿಗೆ ಧಾರವಾಡಕ್ಕೆ ಕಳುಹಿಸಲಾಗಿದೆ. ಆತನಿಗೆ ತಂದೆ- ತಾಯಿ ಇಬ್ಬರೂ ಇಲ್ಲವಾಗಿದ್ದು, ಇದ್ದ ತಮ್ಮನ ಕುರಿತು ಕೂಡ ಆತನಿಗೆ ಯಾವುದೇ ಸುಳಿವು ಇಲ್ಲ. ಸದ್ಯಕ್ಕೆ ನಾವೇ ಆತನ ಬಗ್ಗೆ ಕಾಳಜಿ ವಹಿಸಲಾಗುವುದು. 
– ಹರೀಶ್‌ ಆರ್‌. ಕುಂದಾಪುರ ಎಸ್‌ಐ

Advertisement

Udayavani is now on Telegram. Click here to join our channel and stay updated with the latest news.

Next