ರಾಯಚೂರು: ಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ಹೇಯ ಕೃತ್ಯವನ್ನು ದೇಶದ ಎಲ್ಲ ನಾಗರಿಕರೂ ಏಕಕಂಠದಿಂದ ಖಂಡಿಸಬೇಕು.
ಎಲ್ಲರೂ ಸಂಘಟಿತರಾಗಿ ಅದಕ್ಕೆ ಪ್ರತೀಕಾರದ ಉತ್ತರ ನೀಡಬೇಕೆಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪ್ರಾಕಾರದಲ್ಲಿ ಶನಿವಾರ ಹುತಾತ್ಮ ಯೋಧರಿಗೆ ಹಮ್ಮಿಕೊಂಡಿದ್ದ ಶ್ರದಾಟಛಿಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಮಠದಿಂದ ಕೇಂದ್ರ ರಕ್ಷಣಾ ಇಲಾಖೆಗೆ 10 ಲಕ್ಷ ರೂ.ದೇಣಿಗೆ ಘೋಷಿಸಿದ ಅವರು, ಶಾಂತಿಮಂತ್ರ ಪಠಿಸುವುದೊಂದೇ ನಮ್ಮ ಧರ್ಮವಲ್ಲ. ದುಷ್ಟರ ಸಂಹಾರ ಮಾಡುವುದು ಕೂಡ ಧರ್ಮವೇ.
ದೇಶ ಸುಭದ್ರವಾಗಿದ್ದರೆ ನಾವು-ನೀವು ನೆಮ್ಮದಿಯಿಂದ ಇರಲು ಸಾಧ್ಯ.ಗಡಿಯಲ್ಲಿ ಸೈನಿಕರು ದೇಶ ಕಾಯುತ್ತಿದ್ದರೆ ಮಾತ್ರ
ನಾವು-ನೀವೆಲ್ಲ ನೆಮ್ಮದಿಯಿಂದ ಬಾಳಲು ಸಾಧ್ಯ.ಅಂಥ ವೀರ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ನಾವು ಸದಾ ಬೆಂಗಾವಲಾಗಿ ಇರಬೇಕು ಎಂದರು.