Advertisement

ಜನರ ಸಮಸ್ಯೆಗಳಿಗೆ ಸ್ಪಂದಿಸಿ: ಸುಮಲತಾ

04:27 PM Apr 17, 2020 | mahesh |

ಮಂಡ್ಯ: ಸರ್ಕಾರಿ ಅಧಿಕಾರಿಗಳು ಫೋನ್‌-ಇನ್‌ ಮೂಲಕ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ಸೂಚಿಸಬೇಕು ಎಂದು ಸಂಸದೆ ಸುಮಲತಾ ಸಲಹೆ ನೀಡಿದರು. ನಗರದ ಜಿಪಂ ಕಚೇರಿಯಲ್ಲಿ ಕೋವಿಡ್-19, ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೋವಿಡ್-19,  ಸಾಮಾಜಿಕ ತುರ್ತು ಪರಿಸ್ಥಿತಿ ಸೃಷ್ಟಿಸಲಿದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದರಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು. ರೈತರ ಉತ್ಪನ್ನಗಳ ಸಾಗಣೆ ಮತ್ತು ಮಾರಾಟಕ್ಕೆ ತೊಂದರೆಯಾಗದಂತೆ ಕ್ರಮ ವಹಿಸುವುದು. ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಬಿತ್ತನೆ ಬೀಜ, ರಸಗೊಬ್ಬರ ರೈತರಿಗೆ ಸಮರ್ಪಕವಾಗಿ ದೊರಕಿಸಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ್‌, ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ 68 ಹೋಲ್‌ಸೇಲ್‌ ಡೀಲರ್ಗಳಿಗೆ ಪೋನ್‌ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಯಾರು ಯಾರಿಗೆ ಏನು ಬೇಕೋ ಅದನ್ನು ಪೂರೈಸಬಹುದು. ಚೆಕ್‌ಪೋಸ್ಟ್‌ಗಳಲ್ಲಿ
ಸರಕು ಸಾಗಣೆ ವಾಹನಗಳನ್ನು ತಡೆಯದಂತೆ ಕ್ರಮ ವಹಿಸಿದ್ದು, ರೈತರಿಗೆ ಅನನುಕೂಲವಾಗದಂತೆ ಕ್ರಮ ವಹಿಸಿರುವುದಾಗಿ ಸುಮಲತಾ ಅವರು ಹೇಳಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಮಾತನಾಡಿ, ಮಳವಳ್ಳಿ ಹಾಟ್‌ಸ್ಪಾಟ್‌ ಕೇಂದ್ರವಾಗಿ ಪರಿವರ್ತನೆಯಾಗಿದೆ. ಆ ತಾಲೂಕು ಒಂದರಲ್ಲೇ 7 ಪ್ರಕರಣಗಳು ವರದಿಯಾಗಿವೆ. ಇವರೆಲ್ಲರೂ ತಬ್ಲೀ ಯಲ್ಲಿ ಪಾಲ್ಗೊಂಡಿದ್ದ ಧರ್ಮಗುರುಗಳ ಸಂಪರ್ಕದಿಂದ ಬಂದಿರುವುದು ದೃಢಪಟ್ಟಿದೆ. ಆದ ಕಾರಣ ಈದ್ಗಾ ಮೊಹಲ್ಲಾ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಮಂಡ್ಯದ ಸ್ವರ್ಣಸಂದ್ರದಲ್ಲಿ ಒಂದು ಸೋಂಕು ಪ್ರಕರಣ ದೃಢಪಟ್ಟಿದ್ದು, ಆ ಏರಿಯಾವನ್ನು ಕಂಟೈ
ನ್ಮೆಂಟ್‌ ಝೋನ್‌ ಎಂದು ಘೋಷಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಸಭೆಯಲ್ಲಿ ಜಿಪಂ ಸಿಇಒ ಯಾಲಕ್ಕಿಗೌಡ, ಎಸ್ಪಿ ಪರಶುರಾಮ ಇದ್ದರು.

ಸಂಸದರ ನಿಧಿ ವಾಪಸ್‌ ನೀಡುವ ವಿಶ್ವಾಸ
ಮಂಡ್ಯ: ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲಿ ಸೃಷ್ಟಿಯಾಗಿರುವ ಸಾಮಾಜಿಕ ತುರ್ತು ಪರಿಸ್ಥಿತಿ ನಿಯಂತ್ರಿಸಲು ಸಂಸದರ ಕ್ಷೇತ್ರಾಭಿವೃದ್ಧಿ
ನಿಧಿಯನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ಅದನ್ನು ವಾಪಸ್‌ ನೀಡುವ ವಿಶ್ವಾಸವಿದೆ ಎಂದು ಸಂಸದೆ ಸುಮಲತಾ ತಿಳಿಸಿದರು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಹತೋಟಿಯಲ್ಲಿಡುವ ಸಲುವಾಗಿ ಪ್ರಧಾನಿ ಮೋದಿ ಸಂಸದರ ನಿಧಿಯನ್ನು ತುರ್ತು ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆನಂತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವರೆಂಬ ವಿಶ್ವಾಸ ನಮ್ಮಲ್ಲಿದೆ. ಜಿಲ್ಲಾಸ್ಪತ್ರೆಗೆ ವೆಂಟಿಲೇಟರ್‌ ಖರೀದಿಗೆ 50 ಲಕ್ಷ ರೂ. ಹಣ ಕೇಂದ್ರ ದಿಂದ ಬಿಡುಗಡೆಯಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿದೆ ಎಂದರು.

ತರಕಾರಿ ಖರೀದಿಸಿ ಬಡವರಿಗೆ ವಿತರಣೆ
ಸಂಸದೆ ಸುಮಲತಾ ರೈತರು ಬೆಳೆದ ಹಲವು ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿ ಬಡವರು, ನಿರಾಶ್ರಿತರಿಗೆ ವಿತರಿಸಿದ್ದಾರೆ. ದಪ್ಪ ಮೆಣಸಿ ನಕಾಯಿ-5 ಟನ್‌, ಕಲ್ಲಂಗಡಿ-15 ಟನ್‌, ಎಲೆಕೋಸು-15 ಟನ್‌, ಕುಂಬಳಕಾಯಿ-10 ಟನ್‌ ಖರೀದಿ ಮಾಡಿದ್ದಾರೆ. ಅಲ್ಲದೆ, ಟೊಮೆಟೋ-50 ಟನ್‌, ಬಾಳೆ 50 ಟನ್‌, ಎಲೆಕೋಸು-50 ಟನ್‌ ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗೆ ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಸಂಕಷ್ಟದಲ್ಲಿರುವ ಬಡವರಿಗೆ ವಿತರಣೆ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next