Advertisement

ಜನರ ಸಮಸ್ಯೆಗೆ ಸ್ಪಂದಿಸಿ: ಬಣಕಾರ

03:32 PM Aug 22, 2020 | Suhan S |

ಹಿರೇಕೆರೂರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕೆಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಸೂಚಿಸಿದರು.

Advertisement

ರಟ್ಟಿಹಳ್ಳಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ರಟ್ಟಿಹಳ್ಳಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಟ್ಟಿಹಳ್ಳಿ ತಾಲೂಕು ಕೇಂದ್ರವಾಗಿದ್ದರೂ ಕೆಲವೊಂದು ಇಲಾಖೆಗಳಲ್ಲಿ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಅಧಿ ಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕಾರ್ಯ ಮಾಡಬೇಕು. ಹಳ್ಳೂರು-ಹೊನ್ನಾಳಿ ರಸ್ತೆ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಪಟ್ಟಂತೆ ಅಧಿ ಕಾರಿಗಳ ಗಮನಕ್ಕೆ ತರಬೇಕು. ಕುಡುಪಲಿ ಗ್ರಾಮದ ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತ ಸಂಪರ್ಕ ಕೇಂದ್ರದಲ್ಲಿ ಬಂದಿರುವ ತಾಡಪತ್ರಿಗಳನ್ನು ರೈತರಿಗೆ ವಿತರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ ಕೃಷಿ ಅಧಿ ಕಾರಿಗೆ ಸೂಚಿಸಿದರು.

ಈ ಹಿಂದೆ ತೆಗೆದುಕೊಂಡ ರೈತರನ್ನು ಬಿಟ್ಟು ಲಾಟರಿ ಮೂಲಕ ತಾಡಪತ್ರಿ ನೀಡುತ್ತೇವೆ ಎಂದು ಕೃಷಿ ಅಧಿ ಕಾರಿ ಪ್ರಶಾಂತ ಕುಸಗೂರು ತಿಳಿಸಿದರು. ಕಡೂರು ಗ್ರಾಮದಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣಕ್ಕೆ ಬಳಕೆ ಮಾಡುವ ಮರಳನ್ನು ಕಾಲಕಾಲಕ್ಕೆ ಬದಲಾವಣೆ ಮಾಡಬೇ ಕೆಂದು ಸದಸ್ಯ ರೇವಣಪ್ಪ ಯರಳ್ಳಿ ಒತ್ತಾಯಿಸಿದರು. ತುಂಗಾ ಮೇಲ್ದಂಡೆ ಕಾಲುವೆಯ ಅಕ್ಕಪಕ್ಕ ಗಿಡಗಂಟಿ ಬೆಳೆದುಕೊಂಡಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಗಿಡಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಸಭೆಗೆ ಹಾಜರಾಗದ ವಿವಿಧ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ಸದಸ್ಯರು ಸೂಚಿಸಿದರು ತಹಶೀಲ್ದಾರ್‌ ಕೆ.ಗುರುಬಸವರಾಜ, ತಾಪಂ ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ಉಪಾಧ್ಯಕ್ಷ ಭರಮಪ್ಪ ಎಲೇದಹಳ್ಳಿ, ಇಒ ಕೆ.ಸಿ.ಮೋಹನಕುಮಾರ, ಸದಸ್ಯರಾದ ಹೇಮಣ್ಣ ಮುದರಡ್ಡೇರ, ಮಹೇಶ ಗುಬ್ಬಿ, ರೇವಣಪ್ಪ ಯರಳ್ಳಿ, ಚಂದ್ರಪ್ಪ ಸಾಸ್ವಿಹಳ್ಳಿ, ಮಹಬೂಬ್‌ಸಾಬ ಮುಲ್ಲಾ, ಸುಜಾತಾ ಕೊಟಗಿಮನಿ, ಸುಧಾ ಪಾಟೀಲ ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next