Advertisement
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡೇವಿಸ್ ಕಪ್ ಏಶ್ಯ/ಒಶಿಯಾನಿಯಾದ ಪ್ಲೇ ಆಫ್ ರೌಂಡ್ 2ರಲ್ಲಿ ಭಾರತ 4-1ರಿಂದ ಉಜ್ಬೇಕಿಸ್ಥಾನವನ್ನು ಮಣಿಸಿ ವಿಶ್ವ ಗುಂಪಿಗೆ ತೇರ್ಗಡೆಯಾಗಿದೆ. ಯುವ ಆಟಗಾರರಾದ ರಾಮಕುಮಾರ್ ರಾಮನಾಥನ್, ಪ್ರಜ್ಞೆàಶ್ ಗುಣೇಶ್ವರನ್, ರೋಹನ್ ಬೋಪಣ್ಣ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮಾಜಿ ಆಟಗಾರ ಮಹೇಶ್ ಭೂಪತಿ ತಂಡದ ನಾಯಕನಾದ ಬಳಿಕ ಆಡಲಾದ ಮೊದಲ ಪಂದ್ಯಾವಳಿ ಇದಾಗಿತ್ತು. ಆದರೆ ಖ್ಯಾತ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು 27 ವರ್ಷಗಳ ಅನಂತರ ತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು.
ಉಜ್ಬೇಕಿಸ್ಥಾನದ ವಿರುದ್ಧ ಡೇವಿಸ್ ಕಪ್ ಟೆನಿಸ್ ಕೂಟದ ವೇಳೆ ತನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಲಿಯಾಂಡರ್ ಪೇಸ್ ಬಹಿರಂಗ ಬೇಸರ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಭಾರತ ಡೇವಿಸ್ ಕಪ್ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ತಂಡಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ ಎನ್ನುವುದಕ್ಕೆ ಕಾರಣವನ್ನೂ ನೀಡಿದ್ದರು. ಇಬ್ಬರ ವಾಕ್ಸಮರ ಅಖೀಲ ಭಾರತೀಯ ಟೆನಿಸ್ ಸಂಸ್ಥೆಗೆ (ಎಐಟಿಎ) ಮುಜುಗರ ತಂದಿದೆ. ಈ ಕುರಿತಂತೆ ಎಐಟಿಎ ಇಬ್ಬರು ಹಿರಿಯ ಟೆನಿಸಿಗರು ಈ ರೀತಿ ಕಿತ್ತಾಡುವ ಬದಲು ಪ್ರೌಢತೆಯನ್ನು ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದೆ.