ನವ ದೆಹಲಿ : ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ, ರೈತರ ಪ್ರತಿಭಟನೆಗೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮತ್ತೆ ಇಂದು(ಬುಧವಾರ. ಮಾ. 24) ಸೂಚಿಸಿದ್ದಾರೆ.
ಓದಿ : ಗುಯಾನಾದಿಂದ ಭಾರತಕ್ಕೆ ತೈಲ ಹೊತ್ತ ನೌಕೆಯ ಪಯಣ! ಹೊಸ ತೈಲ ಉತ್ಪಾದಕ ದೇಶದಿಂದ ತೈಲ ಖರೀದಿ
ದದ್ಲಾನಿ ಅವರು ಬೆಳೆದ ಸಾವಯವ ಟೊಮೆಟೊಗಳ ಛಾಯಾಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ನೀವು ತಿನ್ನುವ ಆಹಾರ ಮತ್ತು ಬೆಳೆಸುವ ರೈತರನ್ನು ಗೌರವಿಸಿ. ನೀವು ಭೂಮಿಯೊಂದಿಗಿದ್ದರೆ, ನಿಮಗೆ ಇದು ಎಷ್ಟು ತಾಳ್ಮೆಯ, ಕಷ್ಟದ ಕೆಲಸ ಎನ್ನುವುದು ನಿಮಗೆ ಗೊತ್ತಾಗುತ್ತದೆ. #FarmerProtests #FarmersProtest #JaiKisaan #IStandWithFarmers. ” ಎಂದು ಬರೆದುಕೊಂಡಿದ್ದಾರೆ.
Related Articles
ಇನ್ನು, ಜನವರಿ 26ರಂದು ರೈತರ ಪ್ರತಿಭಟನೆ ಹಿಂಸೆಗೆ ತಿರುಗಿದೆ ಎಂದು ಸುದ್ದಿಯಾದ ಹಿನ್ನಲೆಯಲ್ಲಿಯೂ ದದ್ಲಾನಿ ಅವರು ಟ್ವೀಟ್ ಮಾಡಿದ್ದರು, “ಇದು ನಿಮಗೆ ಅರ್ಥವಾಗುತ್ತದೆಯೇ? ಇಷ್ಟು ತಿಂಗಳು ಶಾಂತಿಯುತವಾಗಿ ಪ್ರತಿಭಟಿಸಿದ ರೈತರು, ಹಿಂಸಾತ್ಮಕ್ಕೆ ತಿರುಗಿದ್ದು ಏಕೆ..? ಮೊದಲು ಅಧಿಕಾರದಲ್ಲಿರುವವರು ಇದನ್ನು ಮಾಡುವುದನ್ನು ನಾವು ನೋಡಿದ್ದೇವೆ. Typical play: Send violent stooges, discredit movement.” ಎಂದು ದಾದ್ಲಾನಿ ಬರೆದುಕೊಂಡಿದ್ದರು.
ಈ ಹಿಂದೆ ರೈತರ ಪ್ರತಿಭಟನೆಗೆ ಬಾಲಿವುಡ್ ಸೆಲೆಬ್ರಿಟಿಗಳಾದ ಧರ್ಮೇಂದ್ರ, ಪ್ರಿಯಾಂಕಾ ಚೋಪ್ರಾ, ತಾಪ್ಸೀ ಪನ್ನು, ಅಭಯ್ ಡಿಯೋಲ್, ಸೋನಾಕ್ಷಿ ಸಿನ್ಹಾ, ಸೋನು ಸೂದ್, ಸನ್ನಿ ಡಿಯೋಲ್, ಸೋನಮ್ ಕಪೂರ್, ದಿಲ್ಜಿತ್ ದೋಸಾಂಜ್, ಪ್ರೀತಿ ಜಿಂಟಾ, ಗುಲ್ ಪನಾಗ್, ರಿತೀಶ್ ದೇಶ್ ಮುಖ್, ಸ್ವರಾ ಭಾಸ್ಕರ್, ವೀರ್ ದಾಸ್, ಒನಿರ್ ಮತ್ತು ಸುಶಾಂತ್ ಸಿಂಗ್ ಸೇರಿ ಹಲವರು ಬೆಂಬಲ ಸೂಚಿಸಿದ್ದರು.