Advertisement
ಬ್ರಿಕ್ಸ್ ಶೃಂಗಸಭೆಯ ಪಾರ್ಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಿರು ಅವಧಿಯ ಆದರೆ ಮಹತ್ವದ ಮಾತು ಕತೆ ನಡೆಸಿದ್ದಾರೆ. ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾಟ್ರಾ ಹೇಳಿಕೆ ನೀಡಿ, “ಪ್ರಧಾನಿ ಮೋದಿ ಬ್ರಿಕ್ಸ್‌ನ ವಿವಿಧ ಸದಸ್ಯರ ಜತೆಗೆ ಮಾತುಕತೆ ನಡೆಸಿದರು.
ಬ್ರಿಕ್ಸ್ ವಿಸ್ತರಣೆಗೆ ನಮ್ಮ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬೆನ್ನಲ್ಲಿಯೇ ಒಟ್ಟು ಆರು ದೇಶಗಳನ್ನು ಒಕ್ಕೂಟಕ್ಕೆ ಸೇರ್ಪಡೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳು ಮುಂದಿನ ವರ್ಷದ ಜ. 1ರಿಂದ ಬ್ರಿಕ್ಸ್ ಸದಸ್ಯ ದೇಶಗಳಾಗಲಿವೆ. ಈ ಬಗ್ಗೆ ದಕ್ಷಿಣ ಆಫಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಜೊಹಾನ್ಸ್ ಬರ್ಗ್‌ನಲ್ಲಿ ಘೋಷಣೆ ಮಾಡಿದ್ದಾರೆ.