ರಬಕವಿ-ಬನಹಟ್ಟಿ: ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ. ನನಗೆ ಯಾವುದೆ ಒತ್ತಡವಿರಲಿಲ್ಲ. ಚುನಾವಣೆಗೆ ನಿಲ್ಲುವುದು ಇಲ್ಲ ಎಂಬುದು ಕೂಡಾ ನನ್ನ ಸ್ವಂತ ನಿರ್ಧಾರ. ಈಗ 80 ವರ್ಷಗಳಾಗಿದ್ದು, ರಾಜಕೀಯದ ಎಲ್ಲ ಸ್ಥಾನಗಳನ್ನು ಅಲಂಕರಿಸಿ ದ್ದೇನೆ. ಬೇರೆಯವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮತ್ತು ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಲು ಸಹ ಕರಿಸಿದ್ದೇನೆ ಎಂದು ಬಿಎಸ್‌ವೈ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟು ಹೋಗುವ ಸುದ್ದಿಗಳಿಗೆ ಮಹತ್ವ ಇಲ್ಲ. ಬಿಜೆಪಿ ಹಿರಿಯ ಮುಖಂಡರು ಪಕ್ಷ ತೊರೆಯುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ರಾಹುಲ್ ಗಾಂಧಿ ಸರಿಸಮಾನರಲ್ಲ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ತಾವೇ ಮುಖ್ಯಮಂತ್ರಿಗಳಾಗಿದ್ದೇವೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ, ಅವರ ಕನಸು ನನಸಾಗುವುದಿಲ್ಲ ಎಂದರು.
ಸೋಮಣ್ಣ ಪಕ್ಷ ಬಿಡುವುದಿಲ್ಲ; ಯತ್ನಾಳ್ ಆತ್ಮೀಯ ಸ್ನೇಹಿತ: ಬಿಎಸ್‌ವೈ
ಸೋಮಣ್ಣ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ನಾವು ಆತ್ಮೀಯ ಸ್ನೇಹಿತರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಾವುದೋ ಒಂದೆ ರಡು ಸಂದರ್ಭದಲ್ಲಿ ಹೇಳಿಕೆ ನೀಡಿರುವುದನ್ನು ನಾವು ಅಪರಾಧ ಎಂದು ಪರಿಗಣಿಸುವುದಿಲ್ಲ. ನಮ್ಮ ಮಧ್ಯದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.