Advertisement

America Election: ಅಧ್ಯಕ್ಷ ಚುನಾವಣೆಯಿಂದ ಬೈಡೆನ್‌ ಹಿಂದೆ ಸರಿಯಬೇಕು: ಬರಾಕ್‌ ಒಬಾಮಾ

11:33 AM Jul 19, 2024 | Team Udayavani |

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಚುನಾವಣ ಅಖಾಡಕ್ಕೆ ಇಳಿದಿರುವ ಜೋ ಬೈಡೆನ್‌ ಅವರು ತಮ್ಮ ಸ್ಪರ್ಧೆಯ ಕುರಿತು ಮರು ಪರಿಶೀಲಿಸಬೇಕಾದ ಅಗತ್ಯ ಇದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ದ ವಾಷಿಂಗ್ಟನ್‌ ಪೋಸ್ಟ್‌ ವರದಿ ತಿಳಿಸಿದೆ.

Advertisement

ಚುನಾವಣೆಯಲ್ಲಿ ಬೈಡೆನ್‌ ಅವರ ಗೆಲುವು ಕಠಿನವಾಗುತ್ತಿದೆ. ಈ ನಿಟ್ಟಿನಲ್ಲಿ 81ವರ್ಷದ ಬೈಡೆನ್‌ ಅವರು ತಮ್ಮ ಸ್ಪರ್ಧೆಯ ಔಚಿತ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒಬಾಮಾ ಅವರು ಜನರ ಸಾರ್ವತ್ರಿಕ ಅಭಿಪ್ರಾಯವನ್ನು ಪರಿಗಣಿಸಿ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

2009ರಿಂದ 2017ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬೈಡೆನ್‌ ಅವರು ಡೆಮೋಕ್ರಟಿಕ್‌ ಪಕ್ಷದ ಭಾರೀ ಪ್ರಭಾವಶಾಲಿ ವ್ಯಕ್ತಿಯಾಗಿದ್ದರೇ ಎಂಬ ಪ್ರಶ್ನೆಗೆ ಒಬಾಮಾ ಅವರು ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ಉಲ್ಲೇಖಿಸಿದೆ.

Advertisement

ಅಮೆರಿಕದಲ್ಲಿ ಒಬಾಮಾ ಅವರು ಡೆಮೋಕ್ರಟಿಕ್‌ ಪಕ್ಷ ಸೇರಿದ್ದ ನಂತರ ಬರಾಕ್‌ ಒಬಾಮಾ ಕೂಡಾ ಅತೀ ಪ್ರಭಾವಶಾಲಿ ನಾಯಕ ಎಂದು ಗುರುತಿಸಿಕೊಂಡಿದ್ದರು. ಇದೀಗ ಡೊನಾಲ್ಡ್‌ ಟ್ರಂಪ್‌ ಎದುರು ಬೈಡೆನ್‌ ಅವರನ್ನು ಸ್ಪರ್ಧೆಯಿಂದ ಕೈಬಿಡಬೇಕೆಂದು ಬರಾಕ್‌ ಡೆಮೋಕ್ರಟಿಕ್‌ ಪಕ್ಷಕ್ಕೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next