Advertisement

ಸಮನ್ವಯಾಧಿಕಾರಿ ಸ್ಥಾನಕ್ಕೆ ಕಾ.ತ.ಚಿಕ್ಕಣ್ಣ ರಾಜೀನಾಮೆ

10:46 PM Oct 13, 2019 | Lakshmi GovindaRaju |

ಬೆಂಗಳೂರು: ಕಳೆದ ಏಳು ವರ್ಷಗಳಿಂದ ರಾಷ್ಟ್ರೀಯ ಸಂತ ಕವಿ ಕನಕದಾಸ ಮತ್ತು ಅಧ್ಯಯನ ಕೇಂದ್ರದ ಸಮನ್ವಯಾಧಿ ಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾ.ತ.ಚಿಕ್ಕಣ್ಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಇಲಾಖೆಯ ನಿರ್ದೇಶಕರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿರುವುದಾಗಿ ಕಾ.ತ.ಚಿಕ್ಕಣ್ಣ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಏಳು ವರ್ಷಗಳ ಅವಧಿಯ ಕಾರ್ಯ ತೃಪ್ತಿ ತಂದಿದೆ. ನನ್ನ ಅವಧಿ ಯಲ್ಲಿ 248 ಕಾರ್ಯಕ್ರಮಗಳು ನಡೆದಿದ್ದು, 76 ಕೃತಿಗಳನ್ನು ಪ್ರಕಟಿಸಲಾಗಿದೆ. 10 ಮಂದಿ ಪಿಎಚ್‌ಡಿ ಪಡೆದಿದ್ದಾರೆ. ಜತೆಗೆ ಕಾಲೇಜುಗಳಲ್ಲಿ ಪ್ರಾರಂಭಿಸಿದ ಕನಕ ಓದು ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನನಗೆ ಈ ಕೆಲಸ ಸಾಕು ಅನಿಸಿತು. ಆ ಹಿನ್ನೆಲೆಯಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

15 ಭಾಷೆಗೆ ಕನಕದಾಸರ ಸಾಹಿತ್ಯ ಅನುವಾದ ಹಾಗೂ ತತ್ವಪದಗಳನ್ನು 50 ಸಂಪುಟಗಳಲ್ಲಿ ತರುವ ಯೋಜನೆ ಪೂರ್ಣಗೊಳಿಸುವವರೆಗೆ ಅಧಿಕಾರದಲ್ಲಿ ಮುಂದುವರಿಯುವ ನಿಬಂಧನೆಯಿತ್ತು. ಈ ಎರಡೂ ಯೋಜನೆ ಮುದ್ರಣಕ್ಕೆ ಸಿದ್ಧವಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ವಿಸ್ತರಣೆ ಮಾಡಲಾಗಿತ್ತು: ರಾಷ್ಟ್ರೀಯ ಸಂತಕವಿ ಕನಕದಾಸ ಮತ್ತು ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿಯ ಕಾರ್ಯ ಅವಧಿ 3ವರ್ಷವಾಗಿದ್ದು, ಕಾ.ತ.ಚಿಕ್ಕಣ್ಣ ಅವರು ಈಗಾಗಲೇ ಎರಡು ಅವಧಿ ಪೂರ್ಣಗೊಳಿಸಿದ್ದರು. ಅಧ್ಯ ಯನ ಕೇಂದ್ರದ ಕೆಲ ಯೋಜನೆಗಳು ಮುಕ್ತಾಯದ ಹಂತ ತಲುಪಿದ್ದರಿಂದ ಅವರ ಅವಧಿಯನ್ನು ಸರ್ಕಾರ ವಿಸ್ತರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next