Advertisement

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

08:34 PM Apr 17, 2024 | Team Udayavani |

ಕಲಬುರಗಿ: ಉಸ್ತುವಾರಿ ಸಚಿವರಿಗೆ ಸ್ವ ಜಿಲ್ಲೆ ಜತೆಗೆ ಸ್ವ ಕ್ಷೇತ್ರದಲ್ಲಿ ಲೀಡ್‌ ಕೊಡುವ ನಿರ್ದೇಶನವಿದೆ. ಒಂದು ವೇಳೆ ಲೀಡ್‌ ಕೊಡದಿದ್ದರೆ ಪದತ್ಯಾಗ ಅನಿವಾರ್ಯ. ನೈತಿಕ ಹೊಣೆ ಹೊರುವುದು, ಬಿಡುವುದು ಅವರಿಗೆ ಬಿಟ್ಟಿದ್ದು. ರಾಜಕಾರಣದಲ್ಲಿ ನೈತಿಕ ಹೊಣೆ ಹೊತ್ತು ಪದವಿ ತ್ಯಾಗ ಮಾಡಿರುವ ಉದಾಹರಣೆಗಳಿವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆದರೆ ಸಚಿವರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಸುಳ್ಳುಗಾರ ಪ್ರಧಾನಿ ಮೋದಿ, ಕಲಬುರಗಿ ಬಿಜೆಪಿ ಅಭ್ಯರ್ಥಿ ಡಾ|ಉಮೇಶ ಜಾಧವ ಮತ್ತು ಅವರ ಟೀಂ ಆಟ ಈ ವರ್ಷ ಕಲಬುರಗಿಯಲ್ಲಿ ನಡೆಯಲ್ಲ. ಕೋಲಿ ಹಾಗೂ ಕುರುಬ ಸಮಾಜ ಎಸ್‌ಟಿಗೆ ಸೇರಿಸುವ ಬಗ್ಗೆ ರಕ್ತದಲ್ಲಿ ಬರೆದು ಕೊಡುವುದಾಗಿ ಬಿಜೆಪಿಯವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಹೇಳಿದ್ದರು. ಅದನ್ನು ಜಾರಿಗೆ ತರದವರು ಈಗ ಏನೇನೋ ಸಬೂಬು ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಒತ್ತಟ್ಟಿಗಿರಲಿ, ಕೋಲಿ-ಕುರುಬ ಸಮಾಜ ಎಸ್ಟಿಗೆ ಸೇರಿಸುವ ಕುರಿತಾಗಿ ಸ್ಪಷ್ಟತೆ ನೀಡಲಿ ಎಂದು ಸವಾಲು ಹಾಕಿದರು.

 

Advertisement

Udayavani is now on Telegram. Click here to join our channel and stay updated with the latest news.

Next