Advertisement

ಮನೆ ನಿರ್ಮಾಣಕ್ಕಾಗಿ ರಾಜೀನಾಮೆ ಸವಾಲು

06:20 AM Feb 22, 2018 | |

ವಿಧಾನಸಭೆ: ವಸತಿ ಇಲಾಖೆಯಲ್ಲಿ ನಿರ್ಮಿಸಿರುವ ಮನೆಗಳ ವಿಚಾರದಲ್ಲಿ ಬಿಜೆಪಿ ಸದಸ್ಯ ಯು.ಬಿ.ಬಣಕಾರ್‌ ಮತ್ತು ವಸತಿ ಸಚಿವ ಎಂ.ಕೃಷ್ಣಪ್ಪ ಪರಸ್ಪರ ರಾಜೀನಾಮೆ ನೀಡುವ ಸವಾಲು ಹಾಕಿಕೊಂಡ ಪ್ರಸಂಗ ಬುಧವಾರ ನಡೆಯಿತು.

Advertisement

ಬಜೆಟ್‌ ಲೇಖಾನುದಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಬಸವರಾಜ ಬೊಮ್ಮಾಯಿ, ವಸತಿ ಇಲಾಖೆಯಡಿ 5 ವರ್ಷದಲ್ಲಿ 15.5 ಲಕ್ಷ ಮನೆ ಕಟ್ಟುವುದಾಗಿ ಸರ್ಕಾರ ಹೇಳಿತ್ತಾದರೂ ಅಷ್ಟು ಪ್ರಮಾಣದಲ್ಲಿ ಮನೆ ನಿರ್ಮಾಣವಾಗಿಲ್ಲ. ಕಳೆದ ತಿಂಗಳು ವಸತಿ ಸಚಿವರು ಕೊಟ್ಟ ಮಾಹಿತಿ ಪ್ರಕಾರ 13.69 ಲಕ್ಷ ಮನೆಗಳು ಮಾತ್ರ ಪೂರ್ಣಗೊಂಡಿವೆ. ಆದರೆ ವಾಸ್ತವದಲ್ಲಿ ಆ ಪರಿಸ್ಥಿತಿ ಇಲ್ಲ ಎಂದರು.

ಮಧ್ಯಪ್ರವೇಶಿಸಿದ ಸಚಿವ ಕೃಷ್ಣಪ್ಪ, ಸದ್ಯ 14.10 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಹೇಳಿದಾಗ, ರಾಜ್ಯದಲ್ಲಿ 5.5 ಲಕ್ಷ ಮನೆಗಳು ಕೂಡ ನಿರ್ಮಾಣವಾಗಿಲ್ಲ. ಸಚಿವರು ಅಧಿಕಾರಿಗಳ ಮಾತು ಕೇಳಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಯು.ಬಿ.ಬಣಕಾರ್‌ ಆಕ್ಷೇಪಿಸಿದರು. ಈ ವೇಳೆ ತಮ್ಮ ಮಾಹಿತಿಯನ್ನು ಸಚಿವ ಕೃಷ್ಣಪ್ಪ ಸಮರ್ಥಿಸಿಕೊಂಡಾಗ, ಐದೂವರೆ ಲಕ್ಷಕ್ಕಿಂತ ಹೆಚ್ಚು ಮನೆ ನಿರ್ಮಾಣವಾಗಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.

ಅದಕ್ಕಿಂತ ಕಡಿಮೆ ನಿರ್ಮಾಣವಾಗಿದ್ದರೆ ಸಚಿವರು ರಾಜೀನಾಮೆ ಕೊಡಬೇಕು ಎಂದು ಸವಾಲು ಹಾಕಿದರು. ಇದರಿಂದ ಸಿಟ್ಟುಗೊಂಡ ಸಚಿವ ಎಂ.ಕೃಷ್ಣಪ್ಪ, ನಾನು ಹೇಳಿದಷ್ಟು ಮನೆ ನಿರ್ಮಾಣವಾಗದಿದ್ದಲ್ಲಿ ರಾಜೀನಾಮೆ ನೀಡಲು ಸಿದಟಛಿನಿದ್ದೇನೆ. ಈಗಾಗಲೇ ಸದನದಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು, ಬಣಕಾರ್‌ ರಾಜೀನಾಮೆ ನೀಡಲಿ ಎಂದು ಕಿಡಿ ಕಾರಿದರು. ಅಷ್ಟರಲ್ಲಿ ಬಸವರಾಜ ಬೊಮ್ಮಾಯಿ ಸಚಿವರನ್ನು ಸಮಾಧಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next