Advertisement

ಆರೋಗ್ಯ ಸಚಿವರ ರಾಜೀನಾಮೆ ಆಗ್ರಹ

03:15 PM Nov 07, 2022 | Team Udayavani |

ಚಾಮರಾಜನಗರ: ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಹಾಗೂ ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಸುಧಾಕರ್‌ ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ, ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಆಗ್ರಹಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚಾಮರಾಜನಗರ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು ಹಾಗೂ ಮಹಿಳೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ರಾಜೀನಾಮೆ ಕೊಟ್ಟರೆ ಗೌರವ ಬರುತ್ತದೆ. ಇದು ಕಣ್ಣೀರಿನ ಕಥೆ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯದ ಆಸ್ಪತ್ರೆಗಳು ಜನರಸೇವೆ ಸದಾ ಸಿದ್ಧವಿರಬೇಕು. ಆಸ್ಪತ್ರೆಗಳು ಜನರ ಶತ್ರುಗಳಾಗಬಾರದು. ಸರ್ಕಾರ ಆಸ್ಪತ್ರೆಗಳನ್ನು ಬಹಳ ಉನ್ನತಮಟ್ಟಕ್ಕೆ ತರಬೇಕು. ಸುಮಾರು ಈಗಾಗಲೇ ಅನೇಕ ಆಸ್ಪತ್ರೆಗಳಲ್ಲಿ ಬೇಜವಾಬ್ದಾರಿಯಿಂದ ಅನೇಕರು ಸತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಚಾಮರಾಜನಗರದ ಸಮಗ್ರ ಅಭಿವೃದ್ಧಿ ಬಗ್ಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಜಿಲ್ಲೆಗೆ ಸರ್ಕಾರ ಆಯವ್ಯಯದಲ್ಲಿ ಅನುದಾನ ಕೊಟ್ಟಿಲ್ಲ. ಕಡೆಗಣಿಸಿದ್ದಾರೆ. ಚಾಮರಾಜ ನಗರದ ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿದೆ. ಜಿಲ್ಲಾ ಕ್ರೀಡಾಂಗಣ ಕಾಮಗಾರಿ ಆರಂಭಗೊಂಡು 20 ವರ್ಷಗಳಾಯಿತು. ಮೈದಾನ ಕಾಮಗಾರಿ ಪೂರ್ಣವಾಗಿಲ್ಲ ಸರ್ಕಾರ ಅನುದಾನ ನೀಡಿಲ್ಲ. ತೀರ ಹದಗೆಟ್ಟಿದ್ದು, ಅಭಿವೃದ್ಧಿಯಾಗಿರುವ ಕೆಲಸವೂ ಮೂಲೆಗುಂಪಾಗುತ್ತಿದೆ. ಸರ್ಕಾರ ಜಿಲ್ಲಾ ಕ್ರೀಡಾಂಗಣವನ್ನು ಕಡೆಗಣಿಸಿದೆ. ಹಳ್ಳಿಗಳಿಗೆ ನಿವೇಶನ ಹಂಚಿಲ್ಲ. ಮನೆಗಳನ್ನು ಕೊಟ್ಟಿಲ್ಲ. ವೃಧಾಪ್ಯವೇತನ ಹಂಚಿಲ್ಲ. ಸಾಗುವಳಿ ಚೀಟಿ ಹಂಚಿಲ್ಲ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಚಾಮರಾಜನಗರವನ್ನು ಕಡೆಗಣಿಸಿದ್ದಾರೆ ಎಂದು ವಾಟಾಳ್‌ ನಾಗರಾಜ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next