Advertisement

ಹಳ್ಳಿಹಕ್ಕಿಗೆ ಹುಣಸೂರು ಕ್ಷೇತ್ರದಲ್ಲಿ ಮರುಜೀವ

02:10 PM May 16, 2018 | Team Udayavani |

ಹುಣಸೂರು: ಹುಣಸೂರು ಕ್ಷೇತ್ರದಲ್ಲಿನ ಜಾತಿ ಸಮೀಕರಣ, ಬಿಜೆಪಿಯೊಂದಿಗಿನ ಆಂತರಿಕ ಒಪ್ಪಂದ ಎಚ್‌.ವಿಶ್ವನಾಥರನ್ನು ಗೆಲುವಿನ ದಡ ಸೇರಿಸುವಲ್ಲಿ ಜೆಡಿಎಸ್‌ ವರಿಷ್ಠರು ಯಶಸ್ವಿಯಾಗುವ ಮೂಲಕ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾಗಿದ್ದವರಿಗೆ ರಾಜಕೀಯ ಮರುಜೀವ ನೀಡಿದೆ.

Advertisement

ವಿಶ್ವನಾಥ್‌ ರಾಜಕೀಯ ಅನುಭವ: ದೇವರಾಜ ಅರಸರ ಕಾಲದಿಂದಲೂ ರಾಜಕೀಯವನ್ನು ಕರಗತವಾಗಿಸಿಕೊಂಡಿರುವ ಎಚ್‌.ವಿಶ್ವನಾಥ್‌ ಹಲವಾರು ಚುನಾವಣೆಗಳನ್ನು ಎದುರಿಸಿ, ರಾಜಕೀಯ ಏಳು ಬೀಳುಗಳನ್ನು ಕಂಡವರು. ಕಾಂಗ್ರೆಸ್‌ನಲ್ಲಿದ್ದಾಗ ಸಾಕಷ್ಟು ಅಧಿಕಾರ ಅನುಭವವಿದ್ದವರು.

ಕಾಂಗ್ರೆಸ್‌ ತೊರೆದು ತೆನೆ ಹೊತ್ತನಂತರ ಕ್ಷೇತ್ರದಲ್ಲಿ ಶಾಸಕರ ವಿರೋಧಿಗಳನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಎರಡು ಬಾರಿ ಕ್ಷೇತ್ರಕ್ಕಾಗಮಿಸಿದ ಪಕ್ಷದ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಸಂಘಟಿತವಾಗಿ ಕ್ಷೇತ್ರ ಪ್ರಚಾರ ನಡೆಸುವ ಮೂಲಕ ಮತ ಕ್ರೂಢೀಕರಣಗೊಳಿಸುವಲ್ಲಿ ಯಶಸ್ಸು ಕಂಡವರು. 

ವಿಶ್ವನಾಥ್‌ ಸಿದ್ದರಾಮಯ್ಯರೊಂದಿಗಿನ ಸಂಬಂಧ ಕಡಿದುಕೊಂಡ ಬಳಿಕ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್‌ನಿಂದ ಕರೆತಂದು ಹುಣಸೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದರು. ಅವರು ಹೆಣೆದ ರಣತಂತ್ರದಲ್ಲಿ ಯಶಸ್ವಿಯಾಗಿರುವ ವಿಶ್ವನಾಥರಿಗೆ ಕ್ಷೇತ್ರದಲ್ಲಿನ ಒಕ್ಕಲಿಗರು, ಕುರುಬ ಸಮುದಾಯದ ಬೆಂಬಲ, ಪರಿಶಿಷ್ಟ ಹಾಗೂ ಇತರೆ ಸಮುದಾಯಗಳ ಸಹಕಾರ ವಿಶ್ವನಾಥ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ.

ಸೇಡು ತೀರಿಸಿಕೊಂಡ ವಿಶ್ವನಾಥ್‌: ಸಿದ್ದರಾಮಯ್ಯ ವಿರುದ್ಧ ಸೆಟೆದು ನಿಂತಿದ್ದ ವಿಶ್ವನಾಥರಿಗೆ  ಈ ಚುನಾವಣೆ ಅಗ್ನಿ ಪರೀಕ್ಷೆ ಜೊತೆಗೆ ರಾಜಕೀಯದ ಅಂತ್ಯವಾಗಿತ್ತು. ಇದಕ್ಕಾಗಿ ಜೆಡಿಎಸ್‌ ಸೇರಿದ್ದಲ್ಲದೆ ಬಿಜೆಪಿಯಿಂದ ದುರ್ಬಲ ಅಭ್ಯರ್ಥಿ ಹಾಕುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಗೆಲುವಿನಲ್ಲೂ ತಮ್ಮ ಛಾಪು ಮೂಡಿಸಿ, ಸೇಡು ತೀರಿಸಿಕೊಂಡರೆನ್ನಲಾಗುತ್ತಿದೆ.

Advertisement

ನನಸಾಗದ ಹ್ಯಾಟ್ರಿಕ್‌ ಕನಸು: ಹಿಂದೆ ಒಮ್ಮೆ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಎಚ್‌.ಪಿ.ಮಂಜುನಾಥ್‌ 2008ರಲ್ಲಿ ಸಿದ್ದರಾಮಯ್ಯರ ನಾಮಬಲದಿಂದಲೇ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ,  ಈ ಬಾರಿಯೂ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಕಸಸು ಕಟ್ಟಿಕೊಂಡಿದ್ದರು.

ಇದಕ್ಕಾಗಿ ಸರ್ವ ಸನ್ನದ್ದರಾಗಿದ್ದರು. ಆದರೆ ಇವರ ಗೆಲುವಿನ ಮರ್ಮವರಿತ ಜೆಡಿಎಸ್‌ ತನ್ನೆಲ್ಲಾ ತಂತ್ರ ಬಳಸಿ ಅವರ ಹ್ಯಾಟ್ರಿಕ್‌ ಕನಸನ್ನು ಭಗ್ನಗೊಳಿಸಿದೆ. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಈ ಬಾರಿ ಸೋಲುಂಡರೂ ಕಲೆದ ಬಾರಿಯ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next