Advertisement

ಔರಂಗಾಬಾದ್‌: ಹಲ್ಲೆ ಪ್ರತಿಭಟಿಸಿ ಸರಕಾರಿ ವೈದ್ಯರಿಂದ ಕೆಲಸ ನಿಲುಗಡೆ

05:02 PM Apr 28, 2018 | Team Udayavani |

ಔರಂಗಾಬಾದ್‌ : ಲಿವರ್‌ ತೊಂದರೆ ಇದ್ದ  ಓರ್ವ  ರೋಗಿಯೊಂದಿಗೆ ಬಂದಿದ್ದ 40 ಮಂದಿಯ ಗುಂಪಿಗೆ ಎಮರ್ಜೆನ್ಸಿ ಕೊಠಡಿಯೊಳಗೆ ಬರಕೂಡದೆಂದು ಹೇಳಿದ ವೈದ್ಯರೋರ್ವರ ಮೇಲೆ ಗುಂಪಿನವರು ಹಲ್ಲೆ ನಡೆಸಿದ ಕಾರಣಕ್ಕೆ ಇಲ್ಲಿನ ಸರಕಾರಿ ಮೆಡಿಕಲ್‌ಕಾಲೇಜ್‌ ಆಸ್ಪತ್ರೆಯ ರೆಸಿಡೆಂಟ್‌ ವೈದ್ಯರು ಕೆಲಸ ನಿಲುಗಡೆ ಮಾಡಿದ್ದಾರೆ. 

Advertisement

ಮುಷ್ಕರದ ಅಧಿಕೃತ ಘೋಷಣೆ ಆಗಿಲ್ಲವಾದರೂ ಹಲ್ಲೆಕೋರರ ವಿರುದ್ದ ಆಸ್ಪತ್ರೆ ಆಡಳಿತೆ ಪೊಲೀಸರಿಗೆ ದೂರು ನೀಡಬೇಕೆಂದು ರೆಸಿಡೆಂಟ್‌ ವೈದ್ಯರು ಆಗ್ರಹಿಸಿದರು. ಅಲ್ಲಿಯ ತನಕ ತಾವು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. 

ವೈದ್ಯರ ಈ ಹಠಾತ್‌ ಕೆಲಸ ನಿಲುಗಡೆಯಿಂದ ಮರಾಠವಾಡದ ಆದ್ಯಂತದಿಂದ ಬಂದ ರೋಗಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾದರು. ಆಸ್ಪತ್ರೆಯ ಡೀನ್‌ ಮತ್ತು ಸುಪರಿಂಟೆಂಡೆಂಟ್‌ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next