Advertisement

ಅಗ್ಗದ ದರದಲ್ಲಿ ರೇಷ್ಮೆ ಸೀರೆ ಸಿಗುವುದು ಡೌಟು

06:45 AM Aug 18, 2018 | |

ಮೈಸೂರು: ವರ ಮಹಾಲಕ್ಷ್ಮೀ ಹಬ್ಬಕ್ಕೆ ಹೆಂಗಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಹಿನ್ನಡೆ ಉಂಟಾಗಿದೆ. 

Advertisement

ಒಮ್ಮೆಯಾದರೂ ಮೈಸೂರು ಸಿಲ್ಕ್ ಸೀರೆ ಖರೀದಿಸಿ ತೊಡಬೇಕು ಎಂಬ ಹೆಂಗಳೆಯರ ಆಸೆಗೆ ಪೂರಕವಾಗಿ ಸಮ್ಮಿಶ್ರ ಸರ್ಕಾರದ ರೇಷ್ಮೆ  ಸಚಿವ ಸಾ.ರಾ.ಮಹೇಶ್‌ ಅವರು ಮಹಾಲಕ್ಷ್ಮೀ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಅದರಲ್ಲೂ ಕೇವಲ 4,500 ರೂ.ಗೆ ಮೈಸೂರು ರೇಷ್ಮೆ ನೀಡುವುದಾಗಿ ತಿಂಗಳ ಹಿಂದೆ ಪ್ರಕಟಿಸಿದ್ದರು.

ಸ್ವಾತಂತ್ರ್ಯ ದಿನಾಚರಣೆಗೂ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ಮಾರಾಟ ಮಾಡಲು ರೇಷ್ಮೆ ಸಚಿವರು ಉತ್ಸುಕರಾಗಿದ್ದರು. ಅದರಂತೆ ಪ್ರಕಟಣೆ ನೀಡಲಾಗಿತ್ತು. ಆದರೆ, ಏಕಾಏಕಿ ರಿಯಾಯಿತಿ ದರದ ಸೀರೆ ಮಾರಾಟ ಮುಂದೂಡಿದ್ದರಿಂದ ಕೆಎಸ್‌ಐಸಿ ಮಳಿಗೆಗಳಿಗೆ ತೆರಳಿದ್ದ ಮಹಿಳೆಯರು ಸರ್ಕಾರದ ತೀರ್ಮಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ವರ ಮಹಾಲಕ್ಷ್ಮೀ ಹಬ್ಬಕ್ಕೆ ಮೂರು ದಿನ ಮುಂಚೆ ಆ.21ರಂದು ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಿಯಾಯಿತಿ ದರದ ಮೈಸೂರು ರೇಷ್ಮೆ ಸೀರೆ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಆದರೂ ಅಧಿಕೃತವಾಗಿ ಇನ್ನೂ ಕಾರ್ಯಕ್ರಮ ನಿಗದಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next