Advertisement

ಜಲಾಶಯ; ಸಾರ್ವಜನಿಕರಲ್ಲಿ ಆತಂಕ ಬೇಡ

07:34 AM Jun 16, 2020 | Suhan S |

ಕನಕಗಿರಿ: ನವಲಿ ಬಳಿ ಸ್ಥಾಪಿಸಲು ಹೊರಟಿರುವ ಸಮಾನಾಂತರ ಜಲಾಶಯಕ್ಕೆ ಭೂಮಿ, ಮನೆ,ಯಾವುದೇ ರೀತಿಯ ಆಸ್ತಿ ಕಳೆದುಕೊಳ್ಳುವ ಸಾರ್ವಜನಿಕರಿಗೆ ಆತಂಕಬೇಡ. ಸಂತ್ರಸ್ಥರ ಹಿತ ಕಾಯುವುದೇ ನನ್ನ ಉದ್ದೇಶ. ಯಾವುದೆ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಶಾಸಕ ಬಸವರಾಜ ದಡೇಸೂಗೂರು ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿ ಅಂದಾಜು 12ರಿಂದ 13 ಹಳ್ಳಿಗಳು ಮುಳುಗಡೆಯಾಗಲಿದ್ದು, ಡಿಪಿಆರ್‌ ನಂತರವೇ ಕಳೆದುಕೊಳ್ಳುವ ಆಸ್ತಿಗಳಿಗೆ ಮೊತ್ತ ನಿಗದಿಯನ್ನು ಸರ್ಕಾರ ಮಾಡುತ್ತದೆ. ಮತ ಕ್ಷೇತ್ರದ ಯಾವುದೇ ಹಳ್ಳಿಯನ್ನು ಬೇರೆ ಯಾವುದೆ ಕ್ಷೇತ್ರಕ್ಕೂ ಸ್ಥಳಾಂತರಿಸುವುದಿಲ್ಲ ಕ್ಷೇತ್ರ ವ್ಯಾಪ್ತಿಯ ಪ್ರದೇಶದಲ್ಲೆ ಜಲಾಶಯಕ್ಕೆ ಒಳಪಡುವ ಹಳ್ಳಿಗಳನ್ನು ಮರು ನಿರ್ಮಾಣ ಮಾಡಲಾಗುವುದು. ಹಿರೇಖೇಡ ಗ್ರಾಮ ಪಂಚಾಯತ ವ್ಯಾಪ್ತಿಯ 9 ಹಳ್ಳಿಗಳು ಮತ್ತು ಕರಡೋಣ ಪಂಚಾಯಿತಿಯ 4 ಹಳ್ಳಿಗಳು ಮುಳುಗಡೆ ಆಗಬಹುದೆಂಬ ಮಾಹಿತಿ ಇದೆ. ಅಂದಾಜು 3 ಸಾವಿರ ಕುಟುಂಬಗಳು ನಿರಾಶ್ರಿತರಾಗಬಹುದು. ಆ ಎಲ್ಲಾ ಕುಟುಂಬಗಳಿಗೆ ನ್ಯಾಯ ಯೋಚಿತ ಪರಿಹಾರ ಹಾಗೂ ಸೂರನ್ನು ಕಟ್ಟಿಕೊಡಲಾಗುವುದು.

ಈ ಯೋಜನೆ ಸಫಲವಾದರೆ ಕೊಪ್ಪಳ ಬಳ್ಳಾರಿ ರಾಯಚೂರು ಜಿಲ್ಲೆಯ ರೈತರಿಗೆ ಅನೂಕೂಲವಾಗಲಿದ್ದು, ಈ ಒಳ್ಳೆಯ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ವಿರೋಧ ಪಕ್ಷದ ಸ್ನೇಹಿತರು ಸಹ ಈ ಯೋಜನೆಯ ಕುರಿತು ಇಲ್ಲ ಸಲ್ಲದ ಉಹಾಪೋಹಗಳನ್ನು ಹೇಳುವುದು ಬಿಟ್ಟು ಪುರ್ಣ ಪ್ರಮಾಣದ ಮಾಹಿತಿ ಪಡೆದು ಮಾತನಾಡಬೇಕು. ಒಂದು ಕೆಲಸ ಮಾಡಬೇಕಾದರೆ ಪರ ವಿರೋದ ಇರುವುದು ಸಹಜ ಇದನ್ನೇ ಮುಂದಿಟ್ಟುಕೊಂಡು ಒಳ್ಳೆಯ ಕೆಲಸ ನಿಲ್ಲಿಸಲಾಗುವುದಿಲ್ಲ. ಸಾರ್ವಜನಿಕರ ಸಭೆ ಕರೆದು ಅವರ ಬೇಡಿಕೆ ಅನುಸಾರವೇ ನಡೆಯಲಿದೆ. 50 ಟಿಎಂಸಿ ನೀರು ಸಂಗ್ರಹದ ಪ್ರಮಾಣದ್ದು ಆಗಲಿ ಎಂಬುದು ಸರ್ಕಾರದ ಹಾಗೂ ನಮ್ಮ ಇಚ್ಚೆಯಿದೆ. ಇದು ಹಂತ ಹಂತವಾಗಿ ಆಗುತ್ತದೆ. ಸದ್ಯಕ್ಕೆ 35 ಟಿಎಂಸಿ ನೀರು ಸಂಗ್ರಹದ ಪ್ರಮಾಣದಲ್ಲಿ ಜಲಾಶಯ ಆಗಲಿದೆ ಎಂದು ಹೇಳಿದರು.

ನಂತರ ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್‌ ಮಾತನಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಬಸನಗೌಡ, ಪ್ರಮುಖರಾದ ವಾಗೀಶ ಹಿರೆಮಠ, ನಾಗರಾಜ ಇದ್ಲಾಪುರ, ರಂಗಪ್ಪ ಕೊರಗಟಿಗಿ, ಹರೀಶ್‌ ಪೂಜಾರ, ತಿಪ್ಪಯ್ಯ ಸ್ವಾಮಿ ಮರುಕುಂಬಿ, ಪಾಂಡುರಂಗ ರಾಠೊಡ, ಕೃಷ್ಣವೇಣಿ ಬೊಂದಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next