Advertisement
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಳಚಿ ಬಿದ್ದ ಬಳಿಕ ತಾಂತ್ರಿಕ ಪರಿಶೀಲನ ಸಮಿತಿಯ ಆರು ಸದಸ್ಯರನ್ನೊಳಗೊಂಡ ತಂಡ ಸೆ. 9, 10ರಂದು ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಡ್ಯಾಂನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತುಂಗಭದ್ರಾ ಮಂಡಳಿಗೆ ಸೆ. 17ರಂದು ವರದಿ ಸಲ್ಲಿಸಿದೆ. ಈ ಬಗ್ಗೆ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ.
ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಬಲವರ್ಧನೆಗೆ ಎನ್‌ಡಿಟಿ ಟೆಸ್ಟಿಂಗ್ ನಡೆಸುವ ಆವಶ್ಯಕತೆ ಇದೆ. ಈ ವರದಿ ಅನ್ವಯ ಕ್ರಸ್ಟ್‌ಗೇಟ್ ಮರು ನಿರ್ಮಾಣ ಮಾಡಿ ಅಳವಡಿಸಬೇಕಿದೆ. ಹೊಸ ಗೇಟ್‌ಗಳನ್ನು ನಿರ್ಮಾಣ ಮಾಡುವುದಕ್ಕೂ ಮುನ್ನ ಜಲಾಶಯಕ್ಕೆ ಧಕ್ಕೆಯಾಗದಂತೆ ಎನ್‌ಡಿಟಿ ಪರೀಕ್ಷೆ ನಡೆಸಬೇಕಿದೆ. ಇದರಿಂದ ಜಲಾಶಯದ ಗಟ್ಟಿತನದ ಬಗ್ಗೆ ತಿಳಿಯಲಿದೆ ಎಂದು ಉಲ್ಲೇಖೀಸಲಾಗಿದೆ. ತುಂಗಭದ್ರಾ ಜಲಾಶಯಕ್ಕೆ ಪರಿಣತ ತಜ್ಞ ಎ.ಕೆ. ಬಜಾಜ್ ನೇತೃತ್ವದ ಸಮಿತಿ ಜಲಾಶಯದಲ್ಲಿ ನಾನ್ ಡಿಸ್ಟ್ರೆಕ್ಟಿವ್ ಟೆಸ್ಟಿಂಗ್ (ಎನ್‌ಡಿಟಿ) ನಡೆಸುವ ಅಗತ್ಯತೆ ಕುರಿತು ವರದಿ ನೀಡಿದೆ. ಮೂರು ರಾಜ್ಯಗಳ ನೀರಾವರಿ ತಜ್ಞರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
– ಒ.ಆರ್.ಕೆ. ರೆಡ್ಡಿ,
ತುಂಗಭದ್ರಾ ಮಂಡಳಿ ಕಾರ್ಯದರ್ಶಿ