ಜಮೀನನ್ನು ದರಕಾಸ್ತು ಕಮಿಟಿಯಲ್ಲಿ ಗ್ರಾಮದ ಬಲಾಡ್ಯರಿಗೆ ನೀಡಬಾರದೆಂದು ವಿರೋಧಿಸಿ ರೈತ ಸಂಘ ಮತ್ತು ಕುರಿಗಾಹಿಗಳು ನಗರದ
ಮಿನಿವಿಧಾನಸೌಧ ಎದುರು ಕುರಿಗಳ ಸಮೇತ ಪ್ರತಿಭಟನೆ ನಡೆಸಿದರು.
Advertisement
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಟಿ.ಕುರುಬರಹಳ್ಳಿಯಲ್ಲಿ ಶೇ.80 ನಾಯಕಸಮುದಾಯ ವಾಸವಾಗಿದ್ದು, ಅವರು ತಮ್ಮ ಜೀವನ ನಿರ್ವಹಣೆಗೆ ಕುರಿ ಮೇಯಿಸುತ್ತಿ ದ್ದಾರೆ. ಟಿ.ಕುರುಬರಹಳ್ಳಿ ಸ.ನಂ. 36/1ರಲ್ಲಿನ 36 ಎಕರೆ ಹಾಗೂ ಸ.ನಂ. 37ರಲ್ಲಿ 25 ಎಕರೆ ಸೇರಿ 52 ಎಕರೆ ಜಮೀನನ್ನು ಹುಲ್ಲುಗಾವಲಿಗೆ ಮೀಸಲಿಟ್ಟು ಹಿಂದಿನ ತಹಶೀಲ್ದಾರ್ ಬಿ.ಎನ್
.ಪ್ರವೀಣ್ ಆದೇಶಿಸಿದ್ದರು. ಅಂತೆಯೇ ಜಮೀನನ್ನು ಕುರಿಗಾವಲಿಗೆ ಹೊರತುಪಡಿಸಿ, ಬೇರೆ ಚಟುವಟಿಕೆಗಳಿಗೆ ಮಂಜೂರು ಮಾಡಬಾರದೆಂಬ
ನಾಮಫಲಕ ಅಳವಡಿಸಿದ್ದರು ಎಂದರು.
ಅದರಂತೆ ಕುರಿಗಾಹಿಗಳು ಈ ಜಮೀನಿನಲ್ಲಿ ಕುರಿ ಮೇಯಿಸಿಕೊಂಡಿರುವಾಗ ಗ್ರಾಮದ ಕೆಲವು ಬಲಾಡ್ಯರು ಕಂದಾಯ ಇಲಾಖೆಯಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಕೆಲವು ದರಕಾಸ್ತು ಸದಸ್ಯರ ಕುಮ್ಮಕ್ಕಿನಿಂದ ಟಿ.ಕುರುಬರಹಳ್ಳಿ ಸ.ನಂ. 36/1ರಲ್ಲಿನ 36 ಎಕರೆ ಹಾಗೂ ಸ.ನಂ. 37ರಲ್ಲಿ 25 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಲು ಪ್ರಯತ್ನಿಸುತ್ತಿರುವುದು ಸರಿಯಾದಕ್ರಮ ಅಲ್ಲ ಎಂದು ದೂರಿದರು. ಇದನ್ನೂ ಓದಿ:ಮುಂಬೈ: ನಿರ್ಭಯಾ ರೀತಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು
Related Articles
ಭೂಮಿಗಾಗಿ ಟಿ.ಕುರುಬರಹಳ್ಳಿ ಕುರಿಗಾಹಿಗಳು ಮತ್ತು ರೈತ ಸಂಘದಿಂದ ಮಹಾಯುದ್ಧವೇ ನಡೆಯಲಿದೆ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ
ನೀಡಿದ ಅವರು ತಹಶೀಲ್ದಾರ್ ರಾಜಶೇಖರ್‌ಗೆ ಮನವಿ ಸಲ್ಲಿಸಿದರು.
Advertisement
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರಾಜಶೇಖರ್, ಯಾವುದೇ ಕಾರಣಕ್ಕೂ ಹುಲ್ಲುಗಾವುಲಿಗೆ ಮೀಸಲಿಟ್ಟಿರುವ ಗೋಮಾಳಜಮೀನನ್ನು ದರಕಾಸ್ತು ಕಮಿಟಿಯಲ್ಲಿ ಮಂಜೂರು ಮಾಡುವುದಿಲ್ಲವೆಂದು ಭರವಸೆ ನೀಡಿದರು. ತಾಲೂಕು ಅಧ್ಯಕ್ಷ ಫಾರುಕ್‌ಪಾಷ, ಹಸಿರು ಸೇನೆ
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಮೂರಂಡಹಳ್ಳಿ ಶಿವಾರೆಡ್ಡಿ, ವಿಜಯ್‌ಪಾಲ್, ವೇಣು, ನವೀನ್, ಕೇಶವ, ಹೆಬ್ಬಣಿ ಆನಂದರೆಡ್ಡಿ, ನಂಗಲಿ ಯುವ ಮುಖಂಡ ಕಿಶೋರ್, ಧರ್ಮ, ನಾಗೇಶ್,ಟಿ.ಕುರುಬರಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಮತ್ತು ಚನ್ನರಾಯಪ್ಪ ಹಲವರಿದ್ದರು.