Advertisement

ಅರಣ್ಯಪ್ರದೇಶದಲ್ಲಿ ಕಟ್ಟಡ: ಕೇಸ್‌ ದಾಖಲು

04:52 PM Dec 23, 2021 | Team Udayavani |

ಕನಕಪುರ: ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಐವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್‌ ದಾಖಲು ಮಾಡಿದ್ದಾರೆ.

Advertisement

ತಾಲೂಕಿನ ಸಾತನೂರು ಹೋಬಳಿಯ ಕಬ್ಟಾಳು ಮೀಸಲು ಅರಣ್ಯ ಪ್ರದೇಶದ ಕಬ್ಟಾಳು ಮತ್ತು ಕಂಚನಹಳ್ಳಿ ರಸ್ತೆಗೆ ಹೊಂದಿಕೊಂಡಂತಿರುವ ಭೀಮ ಕಿಂಡಿ ದೇವಾಲಯದ ಪಾದದ ಬಳಿ ಅರಣ್ಯದಲ್ಲಿ ಆಕ್ರಮ ಪ್ರವೇಶ ಮಾಡಿ ಮದುವೆ ಮತ್ತು ಇತರೆ ಸಮಾರಂಭಗಳಿಗೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಂಚನಹಳ್ಳಿ ಗ್ರಾಮದ ನಾಗರಾಜು, ಭೀಮೇಗೌಡ, ಪುಟ್ಟರಾಜು, ಪ್ರದೀಪ್‌, ರಾಮಚಂದ್ರ, ಸೇರಿದಂತೆ ಐವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್‌ ದಾಖಲು ಮಾಡಿದ್ದಾರೆ.

ಕಬ್ಟಾಳು ಮತ್ತು ಕಂಚನಹಳ್ಳಿ ಗ್ರಾಮದ ರಸ್ತೆ ಅಬಿವೃದ್ಧಿ ಮಾಡುವ ನೆಪದಲ್ಲಿ ಅರಣ್ಯ ಪ್ರದೇಶದ ಮಣ್ಣನ್ನು ಬಳಸಿಕೊಂಡು ಅರಣ್ಯದ ಮೂಲ ಸ್ವರೂಪವನ್ನು ಹಾಳು ಮಾಡುತ್ತಿದ್ದಾರೆ. ರಸ್ತೆ ಕಾಮಗಾರಿಗೆ ಆಕ್ರಮವಾಗಿ ಅರಣ್ಯ ಪ್ರದೇಶದ ಮಣ್ಣನ್ನು ಲೂಟಿ ಮಾಡುತ್ತಿರುವವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಂಚನಹಹಳ್ಳಿ ರವಿಕುಮಾರ್‌ ಆರೋಪ ಮಾಡಿದ್ದಾರೆ.

ರಸ್ತೆ ಅಭಿವೃದ್ಧಿ ನೆಪದಲ್ಲಿ ಅರಣ್ಯದ ಮಣ್ಣು ತೆಗೆಯುತ್ತಿರುವವ ವಿರುದ್ಧವೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿರುವ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next