Advertisement
ಅದರಂತೆ 3ಎಯಲ್ಲಿರುವ ಒಕ್ಕಲಿಗ ಮತ್ತು ಇತರ ಸಮುದಾಯಗಳನ್ನು ಅತಿ ಹಿಂದುಳಿದ ಎಂದು ಪರಿಗಣಿಸಿ ಪ್ರವರ್ಗ-2ಸಿ ಎಂದು ಪರಿಗಣಿಸಿ ಹೊಸ ಪ್ರವರ್ಗ ಸೃಷ್ಟಿಸಲಾಗಿದೆ. 3ಬಿ ಯಲ್ಲಿರುವ ವೀರಶೈವ ಲಿಂಗಾ ಯತ ಪಂಚಮಸಾಲಿ ಮತ್ತು ಇತರ ಸಮು ದಾಯಗಳನ್ನು ಅತಿ ಹಿಂದುಳಿದ ಎಂದು ಪರಿಗಣಿಸಿ 2ಡಿ ಮೀಸಲಾತಿ ಅವಕಾಶದ ಹೊಸ ಪ್ರವರ್ಗ ಸೃಜಿಸಲಾಗಿದೆ.ಆದರೆ ಈಗಾಗಲೇ ಅತ್ಯಂತ ಹಿಂದು ಳಿದ ಪ್ರವರ್ಗ-1 ಹಾಗೂ 2ಎಗೆ ಧಕ್ಕೆ ಹಾಗೂ ಬದಲಾವಣೆ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳತಕ್ಕದ್ದು ಎಂದೂ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದ್ದು, ಪ್ರವರ್ಗ-2ಸಿ ಮತ್ತು 2ಡಿಗೆ ನೀಡಿರುವ ಮೀಸಲಾತಿಯು ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತ ವಾಗಿರಲಿದೆ. ಈ ಮೊದಲು 2ಬಿ ಯಲ್ಲಿದ್ದ ಧಾರ್ಮಿಕ ಅಲ್ಪಸಂಖ್ಯಾಕರನ್ನು (ಮುಸ್ಲಿಂ) ಹಿಂದುಳಿದ ಪಟ್ಟಿಯಿಂದ ಶೇ.10 ಮೀಸಲಾತಿ ಇರುವ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಲಾಗಿದೆ.
ಆದೇಶದ ಪ್ರತಿಯನ್ನು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಹಸ್ತಾಂತರಿಸಿದರು. ಆದೇಶ ಪತ್ರ ಪಡೆದ ಸ್ವಾಮೀಜಿ, ಮುಖ್ಯಮಂತ್ರಿಯನ್ನು ಅಭಿನಂದಿಸಿ ಸಮ್ಮಾನಿಸಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, 2ಎ ಮೀಸಲಾತಿ ಪಡೆಯಲು ಹೈಕೋರ್ಟ್‌ನಲ್ಲಿ ತಡೆ ಇರುವುದರಿಂದ 2ಡಿ ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರಕಾರ ಶೇ.7ರ ಮೀಸಲಾತಿ ಕೊಟ್ಟಿದ್ದು, ಇದು ನಮ್ಮ ನಿರಂತರ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ಹೋರಾಟದಿಂದ ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರ ಸಮಾಜಗಳಿಗೆ ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದರು. ಹೊಸದಾಗಿ ಸೃಷ್ಟಿಸಿದ ಪ್ರವರ್ಗದ ಸಮುದಾಯ
ಪ್ರವರ್ಗ- 2ಸಿ (ಅತಿ ಹಿಂದುಳಿದವರು)
ಮೀಸಲಾತಿ ಪ್ರಮಾಣ- ಶೇ. 6
ಒಳಪಡುವ ಜಾತಿಗಳು- ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ನಾಮಧಾರಿ ಒಕ್ಕಲಿಗ, ಗಂಗಡ್‌ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ (Gouda/ Gowda), ಹಳ್ಳಿಕಾರ್, ಕುಂಚಿಟಿಗ, ಕಾಪು, ಹೆಗ್ಗಡೆ, ಕಮ್ಮ, ರಡ್ಡಿ, ಗೌಂಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ/ ಉತ್ತಮ ಕೊಳಗ.
Related Articles
Advertisement
ಪ್ರವರ್ಗ- 2ಡಿ (ಅತಿ ಹಿಂದುಳಿದವರು)– ಮೀಸಲಾತಿ ಪ್ರಮಾಣ- ಶೇ. 7
ವೀರಶೈವ ಲಿಂಗಾಯತ, ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ, ಭೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ, ಕುರುಬ, ಬಜಂತ್ರಿ, ಬಂಡಾರಿ, ಹಡಪದ, ಕ್ಷೌರಿಕ, ನವಲಿಗ ನಾವಿ, ಅಕ್ಕಸಾಲಿ, ಬಡಿಗಾರ್, ಕಮ್ಮಾರ, ಕಂಸಾಳ, ಪಂಚಾಳ, ಮೇದರ ಉಪ್ಪಾರ, ಗೌಳಿ, ಲಿಂಗಾಯತ/ ವೀರಶೈವ- ವೀರಶೈವ ಪಂಚಮಸಾಲಿ. ಮರಾತ, ಮರಾಠ, ಅರೆ ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾಠ, ಕುಳವಾಡಿ. ಜತೆಗೆ ಕ್ರಿಶ್ಚಿಯನ್, ಬಂಟ್, ಪರಿವಾರ ಬಂಟ್, ಜೈನರು (ದಿಗಂಬರರು), ಸಾತಾನಿ, ಚಾತ್ತಾದ ಶ್ರೀವೈಷ್ಣವ/ ಚಾತ್ತಾದ ವೈಷ್ಣವ/ ಶಾತ್ತಾದ ವೈಷ್ಣವ/ ಶಾತ್ತಾದ ಶ್ರೀವೈಷ್ಣವ, ಕದ್ರಿ ವೈಷ್ಣವ, ಸಮೆರಾಯ, ಸಾತ್ತದವಲ್, ಸಾತ್ತದವನ್, ವೈಷ್ಣವ.