Advertisement
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪಂಚಮಸಾಲಿ ಲಿಂಗಾಯತ ವಕೀಲರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ರಾಜ್ಯಾದ್ಯಂತ ಬೃಹತ್ ಹೋರಾಟದ ಬಳಿಕ ಬಿಜೆಪಿ ಸರ್ಕಾರದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದನೆ ನೀಡಿದಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ, ಅಧಿಕಾರ ಇರದಿದ್ದಾಗ ಗರ್ಜಿಸುವ ರಾಜಕಾರಣಿಗಳು ಅಧಿಕಾರ ಬಂದ ಮೇಲೆ ಯಾಕೆ ಮೌನ ವಹಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ, ಅಧಿಕಾರ ಇಲ್ಲದಿದ್ದಾಗ ಹೋರಾಟಕ್ಕೆ ಬಲ ಕೊಡುತ್ತೀರಾ ಅಧಿಕಾರ ಇದ್ದಾಗಲು ಬಲ ಕೊಡಬೇಕೆಂದು ನಮ್ಮ ಆಗ್ರಹ ಎಂದರು.
ರಾಜ್ಯದಲ್ಲಿ 20 ಮಂದಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದ ಶಾಸಕರಿದ್ದಾರೆ. ಅಧೀವೇಶನದಲ್ಲಿ ಮೀಸಲಾತಿ ಕುರಿತು ಪ್ರಸ್ತಾಪಿಸಬೇಕೆಂದು ಹೇಳಿದಾಗ ಸ್ಪೀಕರ್ ಅವಕಾಶ ಕೊಡಲಿಲ್ಲ ಎನ್ನುವವರು ನೇರವಾಗಿ ಮುಖ್ಯಮಂತ್ರಿ ಜೊತೆ ಯಾಕೆ ಮಾತುಕತೆ ನಡೆಸಲಿಲ್ಲ, ಅಧಿಕಾರ ಶಾಶ್ವತವಲ್ಲ ಸಮಾಜ ಶಾಶ್ವತ ಎಂಬುದು ಅರಿತು ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. ಕಾನೂನು ಮೂಲಕ ಒತ್ತಡಕ್ಕೆ ಸಮ್ಮೇಳನ:
ಕಾನೂನು ಮೂಲಕ ಒತ್ತಡ ಹಾಕಲು ಇಡೀ ಉತ್ತರ ಕರ್ನಾಟಕದ ವಕೀಲರ ಬೃಹತ್ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದಲ್ಲಿ ಪಂಚಮಸಾಲಿ ಸಮಾಜದ ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಮೀಸಲಾತಿ ಹೇಗೆ ಪಡೆಯಬೇಕೆಂದು ಹೋರಾಟದ ರೂಪುರೇಷೆ ಕುರಿತು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು. ಸೆ.22 ರಂದು ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಬೆಳಗಾವಿಗೆ ಆಗಮೀಸಬೇಕೆಂದು ಸ್ವಾಮೀಜಿ ಕರೆ ನೀಡಿದರು.
Related Articles
Advertisement