Advertisement

ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮೀಸಲಾತಿ ಕಲ್ಪಿಸಿ

01:13 PM Jan 07, 2018 | Team Udayavani |

ದೊಡ್ಡಬಳ್ಳಾಪುರ: ಪಂಚಾಯಿತಿ ಚುನಾವಣೆಗಳಂತೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಹಾಗೂ ಸಂಘ-ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕಿದೆ ಎಂದು ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ ಹೇಳಿದ್ದಾರೆ. ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಜೆಡಿಎಸ್‌ ತಾಲೂಕು ಮಹಿಳಾ ಘಟಕದ
ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಪಕ್ಷ ಸಂಘಟನೆಯಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳಿ: ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡ 33ರಷ್ಟು ಮೀಸಲಾತಿಯಿದ್ದು, ಇದನ್ನು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿಯೂ ಜಾರಿಗೊಳಿಸಬೇಕು. ಮೀಸಲಾತಿ ಬಗ್ಗೆ ಮಹಿಳೆಯರು ದನಿ ಎತ್ತಬೇಕಿದೆ. ಮಹಿಳೆಯರಿಗೆ ಇರುವ ಸ್ಥಾನಮಾನಗಳ ಕುರಿತು ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ.

ಜೆಡಿಎಸ್‌ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪಕ್ಷ ಸಂಘಟನೆಯಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಂಡು ಮುಂದೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರ ತರಲು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯ: ಜೆಡಿಎಸ್‌ ಜಿಲ್ಲಾ ವೀಕ್ಷಕ ಡಾ.ಎಚ್‌.ಜಿ.ವಿಜಯಕುಮಾರ್‌ ಮಾತನಾಡಿ, ರಾಜ್ಯದಲ್ಲಿ ಹಿಂದಿನ ಬಿಜೆಪಿ ಆಡಳಿತ ಹಾಗೂ ಈಗಿನ ಕಾಂಗ್ರೆಸ್‌ ಆಡಳಿತದಿಂದ ಜನ ಬೇಸತ್ತಿದ್ದಾರೆ. ಜೆಡಿಎಸ್‌ ಈ ಬಾರಿ ಹೆಚ್ಚಿನ ಸ್ಥಾನ ಗಳಿಸುತ್ತದೆ ಎನ್ನುವ ವಿಶ್ವಾಸವಿದೆ. ಹೈಕಮಾಂಡ್‌ ಸಂಸ್ಕೃತಿಯ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ
ಈ ರಾಜ್ಯದ ಏಳಿಗೆ ಸಾಧ್ಯವಿಲ್ಲ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ, ಸಾರಾಯಿ ನಿಷೇಧ, ರೈತರಿಗೆ ಜನಸಾಮಾನ್ಯರಿಗೆ ಯೋಜನೆಗಳು ಮೊದಲಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯನ್ನಾಗಿ ಮಾಡಲು ಹಿಂದೆ 20 ತಿಂಗಳ ಆಡಳಿತದಲ್ಲಿ ನೀಡಿರುವ ಕೊಡುಗೆಗಳನ್ನು ಮತದಾರರಿಗೆ ಕಾರ್ಯಕರ್ತರು ಮುಟ್ಟಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ನೀಡಿರುವ ಕೊಡುಗೆಗಳ ಕುರಿತಂತೆ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಜೆಡಿಎಸ್‌ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಶಾಂತಮ್ಮ, ನಗರ ಘಟಕದ ಅಧ್ಯಕ್ಷರಾಗಿ ಸುಶೀಲಾ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಜೆಡಿಎಸ್‌ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು: ಶಾಂತಮ್ಮ (ಅಧ್ಯಕ್ಷೆ), ಸುಮಂಗಳಮ್ಮ (ಉಪಾಧ್ಯಕ್ಷೆ), ಜಿ.ಸಿ.ಸೌಭಾಗ್ಯ (ಪ್ರಧಾನ ಕಾರ್ಯದರ್ಶಿ), ಸುಜಾತ (ವಕ್ತಾರರು), ಗಾಯತ್ರಿ, ಮಹದೇವಮ್ಮ, ಮುತ್ತಮ್ಮ
(ಕಾರ್ಯದರ್ಶಿಗಳು) ಹಾಗೂ ಸದಸ್ಯರಾಗಿ ಭಾಗ್ಯ, ಮಂಜಮ್ಮ, ಗುಣವತಿ, ಲಲಿತಾಶ್ರೀ, ಮಂಜುಳಾ ಆಯ್ಕೆಯಾಗಿದ್ದಾರೆ. ಜೆಡಿಎಸ್‌ ನಗರ ಮಹಿಳಾ ಘಟಕದ ಪದಾಧಿಕಾರಿಗಳು: ಸುಶೀಲಾ (ಅಧ್ಯಕ್ಷೆ), ಪದ್ಮಮ್ಮ, ಸುಶೀಲಾ (ಉಪಾಧ್ಯಕ್ಷರು), ಭಾರತಿ (ಮಹಾ ಪ್ರಧಾನ ಕಾರ್ಯದರ್ಶಿ), ಎಂ. ಉಮಾದೇವಿ, ರಾಧಾಮಣಿ, ಎನ್‌.ಲಕ್ಷ್ಮೀ, (ಪ್ರಧಾನ ಕಾರ್ಯದರ್ಶಿಗಳು), ಅನುಸೂಯಮ್ಮ (ಖಜಾಂಚಿ) ನಿರ್ಮಲಾ, ವಸಂತ(ಸಂಘಟನಾ ಕಾರ್ಯದರ್ಶಿಗಳು), ಹಾಗೂ ಸದಸ್ಯರಾಗಿ ಎಚ್‌. ಆರ್‌.ಶೈಲಾ, ಉಷಾ ಆಯ್ಕೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next