Advertisement

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

03:27 AM Nov 06, 2024 | Team Udayavani |

ಹಾವೇರಿ/ಶಿಗ್ಗಾಂವಿ: ನಾನು 40 ವರ್ಷಗಳಿಂದ ಮಂತ್ರಿ, ಮುಖ್ಯಮಂತ್ರಿಯಾಗಿದ್ದೇನೆ. ಸಣ್ಣ ಕಪ್ಪು ಚುಕ್ಕೆ ಇಲ್ಲದೇ ಆಡಳಿತ ನಡೆಸಿದ್ದೇನೆ. ಈಗ ಕೇವಲ 14 ಸೈಟ್‌ಗಾಗಿ ರಾಜಕಾರಣ ಮಾಡಬೇಕಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್‌ ಖಾನ್‌ ಪಠಾಣ್‌ ಪರ ಪ್ರಚಾರ ನಡೆಸಿ ಮಾತನಾಡಿ, ನಾನು ದುಡ್ಡು ಮಾಡಬೇಕೆಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ಅಂಥ ಕೆಲಸ ನಾನು ಮಾಡಲಿಲ್ಲ. ಈಗಲೂ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ, ಜೆಡಿಎಸ್‌ ನಾಯಕರು ಸ್ವಾರ್ಥಕ್ಕಾಗಿ ಒಂದಾಗಿ ಸುಳ್ಳು ಆರೋಪ ಹೊರಿಸಿ ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದರು.

ನನ್ನನ್ನು ತೆಗೆಯಲು ಮೋದಿ, ಎಚ್‌ಡಿಕೆ, ದೇವೇಗೌಡ ಷಡ್ಯಂತ್ರ
ಮೋದಿ ಮಹಾನ್‌ ಸುಳ್ಳುಗಾರ ಎಂದು ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ದೇವೇಗೌಡರು ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಈಗ ಇಬ್ಬರೂ ಭಾಯಿ-ಭಾಯಿ ಆಗಿದ್ದಾರೆ. ಇಬ್ಬರೂ ಸೇರಿಕೊಂಡು ನನ್ನನ್ನು ತೆಗೆಯಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next