Advertisement

20ಕ್ಕೆ ಮೀಸಲಾತಿಗಾಗಿ ಹೋರಾಟ

05:57 PM May 16, 2022 | Team Udayavani |

ಗುಡಿಬಂಡೆ: ಪಟ್ಟಣದಲ್ಲಿ ಮೇ 20 ರಂದು ನಡೆಯುವ ಪ.ಜಾತಿ ಮತ್ತು ಪಂಗಡ ಮೀಸಲಾತಿ ಹೋರಾಟದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಾಲ್ಮೀಕಿ ನಾಯಕರ ಸಂಘದ ತಾಲೂಕು ಅಧ್ಯಕ್ಷ ಎನ್‌.ವಿ.ಗಂಗಾಧರ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1958ರ ಬಳಿಕನಡೆದ 1961ರ ಮತ್ತು 2011 ಜನಗಣತಿಗೆ ಅನುಗುಣವಾಗಿ ಶೇ. 21 ಜನಸಂಖ್ಯೆ ಹೆಚ್ಚಾಗಿದೆ. 1958 ರಲ್ಲಿ ನಿಗದಿ ಪಡಿಸಿರುವಂತೆ ಈಗಲೂ ಮೀಸಲಾತಿ ನೀಡುತ್ತಿದ್ದು, ಇದನ್ನು ತಿದ್ದು ಪಡಿ ಮಾಡಿ ಮೀಸಲಾತಿ ಹೆಚ್ಚಿಸುವಂತೆ ಕೋರಿದರೂ ಯಾವುದೇ ಕ್ರಮಕೈಗೊಂಡಿಲ್ಲ.

ಈ ಸಂಬಂಧ ಪರಿಶಿಷ್ಟ ಪಂಗಡದ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಮ್ಮಿಕೊಂಡಿರುವ ಬೃಹತ್‌ 400 ಕಿ.ಮೀ ಗೂ ಹೆಚ್ಚು ದೂರದ ಪಾದಯಾತ್ರೆಗೆ ಬೆಂಬಲಿಸಿ ಇದರಿಂದಾಗಿ ಮೇ ತಿಂಗಳ 20ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಬೃಹತ್‌ ಪ್ರತಿಭಟನೆಯಲ್ಲಿ ಪ.ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸರ್ಕಾರಕ್ಕೆ ಒತ್ತಡ ಹೇರಲು ಸಹಕರಿಸಬೇಕು ಎಂದರು.

ನಂತರ ಡಿ.ಎಸ್‌.ಎಸ್‌. ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಪ.ಜಾತಿ ಮತ್ತು ಪ.ಪಂಗಡದವರಿಗೆ ಶೆ„ಕ್ಷಣಿಕ ಮತ್ತು ಸರ್ಕಾರದ ಸೇವೆಗಳಲ್ಲಿನ ಮೀಸಲಾತಿ ಪ್ರಮಾಣವನ್ನು ಜನ ಸಂಖ್ಯೆ ಗನಗುಣವಾಗಿ ಶೇ 17 ಮತ್ತು ಶೇ 7.5ಕ್ಕೆ ಹೆಚ್ಚಿಸಬೇಕು. ಹೀಗಾಗಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಪ್ರಸ್‌ ಸುಬ್ಬರಾಯಪ್ಪ, ಬೀಚಗಾನಹಳ್ಳಿ ನರೇಂದ್ರ, ಕಡೇಹಳ್ಳಿ ಅನಂದ, ಅಂಜಿನಪ್ಪ, ಪ.ಪಂ ಮಾಜಿ ಅಧ್ಯಕ್ಷ ನಾಗರಾಜ್‌, ಜೀವಿಕ ನಾರಾಯಣಸ್ವಾಮಿ, ಅಮರಾ ವತಿ, ನರಸಿಂಹಪ್ಪ, ಶಿವಪ್ಪ, ನಾಗರಾಜ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next