ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿನ ಎಲ್ಲಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ಸಮತಲ ಮೀಸಲು ಕಲ್ಪಿಸಿ ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ ನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿತಂದು ಅಂತಿಮ ಅಧಿಸೂಚನೆಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆಸರ್ಕಾರ ಮಾಹಿತಿ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿರುವಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯನ್ಯಾಯಪೀಠ, ಸರ್ಕಾರದಈಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಸರ್ಕಾರಿ ವಕೀಲ ವಿಜಯ್‌ಕುಮಾರ್ ಪಾಟೀಲ್, ಸರ್ಕಾರದ ಎಲ್ಲ ಹುದ್ದೆಗಳನೇಮಕಾತಿ ವೇಳೆ ತೃತೀಯ ಲಿಂಗಿಗಳಿಗೆ ಎಲ್ಲಾವರ್ಗಗಳಲ್ಲಿ ಶೇ.1 ಸಮತಲ (ಹಾರಿಜಾಂಟಲ್‌ರಿಸರ್ವೇಷನ್) ಮೀಸಲಾತಿ ಕಲ್ಪಿಸಿ ಕರ್ನಾಟಕ ನಾಗರಿಕಸೇವಾ ನೇಮಕಾತಿ ನಿಯಮ-1977ರ ನಿಯಮ 9ಕ್ಕೆತಿದ್ದುಪಡಿ ತಂದು 1(ಡಿ)ಯನ್ನು ಸೇರ್ಪಡೆಗೊಳಿಸಿ2021ರ ಜು. 6ರಂದು ಅಂತಿಮ ಅಧಿಸೂಚನೆ ಹೊರಡಿಸಿ ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಈ ವೇಳೆ ಪ್ರಕರಣದಲ್ಲಿ ಮಧ್ಯಂತರಅರ್ಜಿದಾರರಾಗಲು ಬಯಸಿರುವ ಜೀವಾಎಂಬಎನ್‌ಜಿಒಪರಹಿರಿಯ ವಕೀಲೆ ಜೈನಾಕೊಠಾರಿ, ಸರ್ಕಾರದ ತಿದ್ದುಪಡಿ ನಿಯಮವುಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರಅನ್ವಯಿಸುತ್ತದೆ.
ಸರ್ಕಾರದ ಇತರೆಪ್ರಾಧಿಕಾರ ಹಾಗೂ ನಿಗಮ-ಮಂಡಳಿಗಳನೇಮಕಾತಿಯಲ್ಲಿ ಈ ತಿದ್ದುಪಡಿನಿಯಮವನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕುಎಂದುಕೋರಿದರು.ನ್ಯಾಯಪೀಠ, ಸರ್ಕಾರದ ಇತರೆ ಪ್ರಾಧಿಕಾರಹಾಗೂ ನಿಗಮ-ಮಂಡಳಿಗಳ ನೇಮಕಾತಿಯಲ್ಲಿತೃತೀಯಲಿಂಗಳಿಗೆ ಶೇ.1 ಮೀಸಲಾತಿ ನೀಡಲುಆದೇಶಿಸುವಂತೆಕೋರಿಪ್ರತ್ಯೇಕಅರ್ಜಿಸಲ್ಲಿಸಬಹುದು.ಆಗ ನ್ಯಾಯಾಲಯಅಗತ್ಯ ನಿರ್ದೇಶನ ನೀಡಬಹುದುಎಂದು ಜೀವಾ ಸಂಸ್ಥೆ ಪರ ವಕೀಲರಿಗೆ ಸೂಚಿಸಿವಿಚಾರಣೆಯನ್ನು ಆ.18ಕ್ಕೆ ಮುಂದೂಡಿತು.