Advertisement

Reserch: ಮಂಗಳ ಗ್ರಹದ 20 ಕಿ.ಮೀ. ಆಳದಲ್ಲಿ ನೀರಿರುವ ಶಂಕೆ

12:49 AM Aug 14, 2024 | Team Udayavani |

ನ್ಯೂಯಾರ್ಕ್‌: ಮಂಗಳ ಗ್ರಹದಲ್ಲಿ ನೀರಿರುವ ಬಗ್ಗೆ ದಶಕಗಳಿಂದ ಸಂಶೋ ಧನೆ ನಡೆಸುತ್ತಿರುವ ವಿಜ್ಞಾನಿಗಳು, ಈ ಬಗ್ಗೆ ಹೊಸ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಮಂಗಳ ಗ್ರಹದ ಸುಮಾರು 20 ಕಿ.ಮೀ. ಆಳದಲ್ಲಿ ಈಗಲೂ ನೀರು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

2018ರಿಂದಲೂ ಮಂಗಳ ಮೇಲ್ಮೆ„ ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಸಾದ ಇನ್‌ಸೈಟ್‌ ಲ್ಯಾಂಡರ್‌ ಒದಗಿಸಿರುವ ಮಾಹಿತಿಯನ್ನು ಆಧರಿಸಿ ಈ ಅನುಮಾನ ವ್ಯಕ್ತಪಡಿಸಲಾಗಿದೆ. ಈ ಲ್ಯಾಂಡರ್‌ ಸುಮಾರು 4 ವರ್ಷಗಳ ಮಂಗಳನ ನೆಲದಲ್ಲಾಗುವ ಕಂಪನದ ಮಾಪನವನ್ನು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನಗಳಿಂದ ಸುಮಾರು 3 ಶತಕೋಟಿ ವರ್ಷಗಳ ಹಿಂದೆ ಮಂಗಳನ ನೆಲದಲ್ಲಿ ನದಿಗಳು, ಸರೋವರಗಳು ಮತ್ತು ಸಮುದ್ರಗಳು ಇದ್ದವು ಎಂಬುದು ದೃಢಪಟ್ಟಿದೆ.

ಇದೀಗ ಮಂಗಳನ ಗರ್ಭ ದಲ್ಲೂ ನೀರು ಹರಿದಿರುವ ಜಾಗಗಳಿಗೆ ಎಂಬ ಮಾಹಿತಿ ಸಿಕ್ಕಿರುವ ಕಾರಣ, ಲ್ಯಾಂಡರ್‌ ತಲುಪಲಾಗದಷ್ಟು ಆಳದಲ್ಲಿ ಇನ್ನೂ ನೀರಿರಬಹುದು ಎಂದು ವಿಜ್ಞಾನಿ ಗಳು ಹೇಳಿದ್ದಾರೆ. ಮಂಗಳ ಗ್ರಹದಲ್ಲಿ ನೀರು ಇರುವುದು ಖಚಿತವಾದರೆ, ಇಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಹೆಚ್ಚಿನ ಪುಷ್ಠಿ ದೊರಕಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next